×
Ad

ಎನ್ ಆರ್ ಸಿ, ಸಿಎಎ ವಿರೋಧಿಸಿ ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕ ನಿರಾಕರಿಸಿದ್ದೆ: ರಬೀಹಾ

Update: 2019-12-24 20:18 IST

ಹೊಸದಿಲ್ಲಿ: ಪೌರತ್ವ ಕಾಯ್ದೆಯನ್ನು ಮತ್ತು ಎನ್ ಆರ್ ಸಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲವಾಗಿ ತಾನು ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ನಿರಾಕರಿಸಿದ್ದೇನೆ ಎಂದು ಪಾಂಡಿಚೇರಿ ವಿವಿಯ ವಿದ್ಯಾರ್ಥಿನಿ ರಬೀಹಾ ಅಬ್ದುರ್ರಹೀಂ ಹೇಳಿದ್ದಾರೆ.

ಇಂದು ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಪ್ರತಿಭಟನೆಗೆ ಬೆಂಬಲ ಸೂಚಿಸಿ ನೀವು ಚಿನ್ನದ ಪದಕವನ್ನು ನಿರಾಕರಿಸಿದ್ದೀರಾ ಅಥವಾ ಅವರು ನಿಮ್ಮನ್ನು ಹೊರಕ್ಕೆ ಕಳಿಸಿದ್ದಾರೆ ಎಂದು ಪದಕ ನಿರಾಕರಿಸಿದ್ದೀರಾ?. ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ನಾನು ಪದಕ ನಿರಾಕರಿಸಿದ್ದೇನೆ. ನಾನು ಇದನ್ನು ಮಾಡುತ್ತೇನೆ ಎಂದು ಭಯಪಟ್ಟೇ ಅವರು ನನ್ನನ್ನು ಹೊರಕ್ಕೆ ಕಳುಹಿಸಿದ್ದಾರೆ" ಎಂದವರು ಹೇಳಿದ್ದಾರೆ.

ಇದಕ್ಕೂ ಮೊದಲು ಹಿಜಾಬ್ ಧರಿಸಿದ್ದಕ್ಕಾಗಿ ರಬೀಹಾರನ್ನು ತಡೆಯಲಾಗಿತ್ತು ಎಂದು ವರದಿಯಾಗಿತ್ತು. ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News