ಏನಿದು ಎನ್‌ಪಿಆರ್: ಇಲ್ಲಿದೆ ಸಂಪೂರ್ಣ ಮಾಹಿತಿ

Update: 2019-12-24 16:40 GMT

ಹೊಸದಿಲ್ಲಿ, ಡಿ.24: ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿರುವ ಎನ್‌ಪಿಆರ್‌ನಲ್ಲಿ ದೇಶದ ಪ್ರತೀ ಸಾಮಾನ್ಯ ನಿವಾಸಿಗಳ ಸಮಗ್ರ ಗುರುತಿನ ದತ್ತಸಂಚಯ (ಮಾಹಿತಿ)ವನ್ನು ಸಂಗ್ರಹಿಸಲಾಗುತ್ತದೆ. ಮನೆಮನೆಗೆ ಭೇಟಿ ನೀಡಿ ಜನಗಣತಿ ಮೂಲಕ ಸಂಗ್ರಹಿಸುವ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಹಾಗೂ ಬಯೊಮೆಟ್ರಿಕ್ ಮಾಹಿತಿಯನ್ನು ಇದರಲ್ಲಿ ನಮೂದಿಸಲಾಗುತ್ತದೆ. ಎನ್‌ಪಿಆರ್‌ನಲ್ಲಿ ಒಟ್ಟು 21 ಮಾಹಿತಿಯನ್ನು ನೀಡಬೇಕಾಗುತ್ತದೆ.

ಇದರಲ್ಲಿ ಪ್ರಮುಖವಾದುದು:

► ಯಾವುದೇ ದಾಖಲೆಯ ಅಥವಾ ಪುರಾವೆಯ ಅಗತ್ಯವಿಲ್ಲ. ವ್ಯಕ್ತಿ ತನ್ನ ವಿವರವನ್ನು ಸ್ವಯಂ ಘೋಷಿಸಬೇಕು.

► ಪೋಷಕರ ಜನನ ದಿನಾಂಕ ಮತ್ತು ಹುಟ್ಟಿದ ಸ್ಥಳದ ವಿವರ

► ಈ ಹಿಂದೆ ವಾಸಿಸುತ್ತಿದ್ದ ಸ್ಥಳ

► ಪ್ಯಾನ್ ನಂಬರ್, ಆಧಾರ್ (ಕಡ್ಡಾಯವಲ್ಲ), ವೋಟರ್ ಐಡಿ ಸಂಖ್ಯೆ, ಡ್ರೈವಿಂಗ್ ಲೈಸೆನ್ಸ್ ನಂಬರ್ ಮತ್ತು ಮೊಬೈಲ್ ನಂಬರ್.

ಅಲ್ಲದೆ ಲಿಂಗ, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕಾಯಂ ಮತ್ತು ತಾತ್ಕಾಲಿಕ ವಿಳಾಸದ ವಿವರ.

► ಈಗ ವಾಸಿಸುತ್ತಿರುವ ಸ್ಥಳದಲ್ಲಿ ಎಷ್ಟು ಸಮಯದಿಂದ ಇದ್ದೀರಿ ಎಂಬ ವಿವರ.

► ಉದ್ಯೋಗ ಮತ್ತು ವಿದ್ಯಾರ್ಹತೆ.

ಇತ್ಯಾದಿ ಮಾಹಿತಿಯನ್ನು ಒಂದು ಸಣ್ಣ ಫಾರಂನಲ್ಲಿ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News