ಎನ್‌ಪಿಆರ್ ಸೋಗಿನಲ್ಲಿ ಎನ್‌ಆರ್‌ಸಿಗೆ ಬಿಜೆಪಿ ಸರಕಾರ ಯತ್ನಿಸುತ್ತಿದೆ:ಕಾಂಗ್ರೆಸ್
Update: 2019-12-26 19:39 IST
ಹೊಸದಿಲ್ಲಿ,ಡಿ.26: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಎನ್‌ಪಿಆರ್ ಸೋಗಿನಲ್ಲಿ ಎನ್‌ಆರ್‌ಸಿ ಜಾರಿಗೊಳಿಸುತ್ತಿದೆ ಎಂದು ಗುರುವಾರ ಇಲ್ಲಿ ಆರೋಪಿಸಿರುವ ಕಾಂಗ್ರೆಸ್,ಎನ್‌ಪಿಆರ್‌ಗೆ ಪೂರ್ವ ಸಿದ್ಧತಾ ನಮೂನೆಗಳಲ್ಲಿ ಎನ್‌ಆರ್‌ಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಿದೆ.
ಸರಕಾರವು ಎನ್‌ಪಿಆರ್‌ನ್ನು ಎನ್‌ಆರ್‌ಸಿ ಜೊತೆ ತಳುಕು ಹಾಕಲು ಪ್ರಯತ್ನಿಸಿದರೆ ತನ್ನ ಪಕ್ಷವು ಅದನ್ನು ವಿರೋಧಿಸಲಿದೆ ಎಂದು ಹೇಳಿದ ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್ ಅವರು,ಅದು ಪ್ರಜೆಗಳ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಸರಕಾರವು ಸಮಾಜದ ಧ್ರುವೀಕರಣವನ್ನು ಬಯಸಿದೆ ಎಂದೂ ಆಪಾದಿಸಿದ ಅವರು,ಎನ್‌ಪಿಆರ್ ಪೂರ್ವ ಸಿದ್ಧತಾ ನಮೂನೆಗಳಲ್ಲಿ ಕೇಳಲಾಗುವ ಪ್ರಶ್ನೆಗಳು ಆ ಪ್ರಕ್ರಿಯೆಗೆ ಅಗತ್ಯವಿಲ್ಲ ಎಂದರು.