ಸಂಘರ್ಷಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಪೋಪ್ ಕರೆ

Update: 2019-12-26 16:29 GMT

ವ್ಯಾಟಿಕನ್ ಸಿಟಿ, ಡಿ. 26: ಜಗತ್ತಿನ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಬೇಕೆಂದು ಪೋಪ್ ಫ್ರಾನ್ಸಿಸ್ ಬುಧವಾರ ತನ್ನ ಕ್ರಿಸ್ಮಸ್ ಸಂದೇಶದಲ್ಲಿ ಕರೆ ನೀಡಿದ್ದಾರೆ.

‘‘ಮಧ್ಯ ಪ್ರಾಚ್ಯ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಮಕ್ಕಳಿಗೆ ಕ್ರಿಸ್ತನು ಬೆಳಕು ತರಲಿ’’ ಎಂದು ವ್ಯಾಟಿಕನ್‌ನಲ್ಲಿ ನೀಡಿದ ಸಂದೇಶದಲ್ಲಿ ಪೋಪ್ ಹೇಳಿದ್ದಾರೆ.

ವೆನೆಝುವೆಲ ಮತ್ತು ಲೆಬನಾನ್‌ಗಳಲ್ಲಿ ನೆಲೆಸಿರುವ ಬಿಕ್ಕಟ್ಟುಗಳು ಮತ್ತು ಹಲವಾರು ಆಫ್ರಿಕನ್ ದೇಶಗಳಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳನ್ನು ಅವರು ತನ್ನ ಸಂದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ದಕ್ಷಿಣ ಸುಡಾನ್‌ನಲ್ಲಿ ಸರಕಾರ ಮತ್ತು ಬಂಡುಕೋರರ ನಡುವಿನ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ, ಬುಧವಾರ ಬೆಳಗ್ಗೆ ಪೋಪ್ ಫ್ರಾನ್ಸಿಸ್ ಮತ್ತು ಕ್ಯಾಂಟರ್‌ಬರಿ ಆರ್ಚ್‌ಬಿಶಪ್ ಜಸ್ಟಿನ್ ವೆಲ್ಬಿ ಆ ದೇಶಕ್ಕೆ ‘ಶಾಂತಿ ಮತ್ತು ಸಮೃದ್ಧಿ’ಯ ಹಾರೈಕೆಗಳನ್ನು ಕಳುಹಿಸಿದರು.

‘‘ಜಗತ್ತಿನ ನೂತನ ದೇಶದಲ್ಲಿ ಸಂಧಾನ ಮತ್ತು ಭ್ರಾತೃತ್ವದ ಹಾದಿಗೆ ಮರಳುವ ಬದ್ಧತೆಯನ್ನು ಜನರಿಗೆ ಒದಗಿಸುವಂತೆ ನಾವು ಪ್ರಾರ್ಥಿಸುತ್ತಿದ್ದೇವೆ’’ ಎಂದು 130 ಕೋಟಿಗೂ ಅಧಿಕ ರೋಮನ್ ಕ್ಯಾಥೊಲಿಕರ ಆಧ್ಯಾತ್ಮಿಕ ನಾಯಕರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News