ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ದೇಶಕ್ಕೆ ಸಮಸ್ಯೆ: ಅಖಿಲೇಶ್ ಯಾದವ್

Update: 2019-12-26 17:50 GMT

ಲಕ್ನೋ, ಡಿ. 25: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಕುರಿತು ಕೇಂದ್ರ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಇದು ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದಕ್ಕಿಂತ ಬೇರೇನೂ ಅಲ್ಲ ಎಂದಿದ್ದಾರೆ.

ಎನ್‌ಆರ್‌ಸಿಗೆ ಎನ್‌ಪಿಆರ್ ಆಧಾರ ಎಂದು ಬಿಜೆಪಿ ಸರಕಾರ ರಾಜ್ಯ ಸಭೆಯಲ್ಲಿ ಹೇಳಿದೆ. ಎಷ್ಟು ಬಾರಿ ಅವರು ಸುಳ್ಳು ಹೇಳುತ್ತಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ನಿಂದ ದೇಶದ ಜನರಿಗೆ ಸಮಸ್ಯೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಹಲವು ದಿಶೆಯಲ್ಲಿ ಉತ್ತರಪ್ರದೇಶ ಸರಕಾರ ವಿಫಲವಾಗಿದೆ. ದೊಡ್ಡ ದೊಡ್ಡ ಪ್ರತಿಪಾದನೆ ಮೂಲಕ ಬಿಜೆಪಿ ನಾಯಕತ್ವ ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ‘‘ಬಿಜೆಪಿ ಉತ್ತರಪ್ರದೇಶವನ್ನು ರೋಗಗಳ ತವರನ್ನಾಗಿ ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆ ನಕಲಿ. ಜನ ಔಷಧಿ ಕೇಂದ್ರದಲ್ಲಿ ಔಷಧ ಲಭ್ಯವಿಲ್ಲದೇ ಇರುವಾಗ, 70 ಲಕ್ಷ ಜನರು ಉಚಿತ ಚಿಕಿತ್ಸೆ ಪಡೆಯುವುದು ಹೇಗೆ? ಭರವಸೆ ನೀಡಲಾದ ಉತ್ತಮ ರಸ್ತೆ, ಶಿಕ್ಷಣ, ಸಾಗಾಟ ಹಾಗೂ ಆರೋಗ್ಯ ಸೌಲಭ್ಯಗಳು ಎಲ್ಲಿ ?’’ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News