×
Ad

ಜ.1ರಿಂದ ರುಪೇ, ಯುಪಿಐಗೆ ಎಂಡಿಆರ್ ಶುಲ್ಕವಿಲ್ಲ

Update: 2019-12-28 22:43 IST

ಹೊಸದಿಲ್ಲಿ,ಡಿ.28: ಡಿಜಿಟಲ್ ಹಣಪಾವತಿಗಳನ್ನು ಉತ್ತೇಜಿಸುವ ಪ್ರಯತ್ನವಾಗಿ ಜ.1ರಿಂದ ರುಪೇ ಮತ್ತು ಯುಪಿಐ ಮೂಲಕ ನಡೆಸಲಾಗುವ ವಹಿವಾಟುಗಳಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕಗಳು ಅನ್ವಯವಾಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಇಲ್ಲಿ ತಿಳಿಸಿದರು.

ಕಂದಾಯ ಇಲಾಖೆಯು ಈ ಬಗ್ಗೆ ಶೀಘ್ರವೇ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಸಿಇಒಗಳೊಂದಿಗೆ ಸಭೆಯ ಬಳಿಕ ಹೇಳಿದರು.

ಇದರಂತೆ 50 ಕೋ.ರೂ.ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲ ಕಂಪನಿಗಳು ತಮ್ಮ ಗ್ರಾಹಕರಿಗೆ ರುಪೇ ಡೆಬಿಟ್ ಕಾರ್ಡ್ ಮತ್ತು ಯುಪಿಐ ಕ್ಯೂಆರ್ ಕೋಡ್ ಮೂಲಕ ಹಣಪಾವತಿಗೆ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. ಎಂಡಿಆರ್ ಶುಲ್ಕವು ವ್ಯಾಪಾರಿ ತನ್ನ ಗ್ರಾಹಕರಿಂದ ಡಿಜಿಟಲ್ ಮಾರ್ಗಗಳ ಮೂಲಕ ಹಣವನ್ನು ಪಡೆಯಲು ಬ್ಯಾಂಕಿಗೆ ಪಾವತಿಸುವ ವೆಚ್ಚವಾಗಿದ್ದು,ಇದನ್ನು ವಹಿವಾಟು ಮೊತ್ತದ ಶೇಕಡಾವಾರು ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News