×
Ad

ಪೌರತ್ವ ಕಾಯ್ದೆ ಬಗ್ಗೆ ಟ್ವಿಟರ್ ಪೋಲ್ ನಡೆಸಿ ಮುಖಭಂಗಕ್ಕೊಳಗಾದ ಜಗ್ಗಿ ವಾಸುದೇವ್ 'ಇಶಾ ಫೌಂಡೇಶನ್'

Update: 2019-12-31 14:40 IST

ಹೊಸದಿಲ್ಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ ಸಿ ವಿರುದ್ಧ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಕೆಲವರು  ಟ್ವಿಟರ್ ಪೋಲ್‍ ಗಳನ್ನು ನಡೆಸಿ ಜನರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವೊಂದು ಪೋಲ್‍ ಗಳನ್ನು ಇದನ್ನು ಆರಂಭಿಸಿದವರೇ ಡಿಲಿಟ್ ಮಾಡಿರುವುದೂ ಹಲವರ ಗಮನಕ್ಕೆ ಬಂದಿದೆ.

ಜಗ್ಗಿ ವಾಸುದೇವ್ ಅವರ 'ಇಶಾ ಫೌಂಡೇಶನ್' ಸೋಮವಾರ ಟ್ವಿಟರ್ ಪೋಲ್ ನಡೆಸಿ ಸಿಎಎ ಹಾಗೂ ಎನ್‍ಆರ್‍ ಸಿ ವಿರುದ್ಧ ಪ್ರತಿಭಟನೆಗಳು ಸಮರ್ಥನೀಯವೇ ಎಂದು ಕೇಳಿತ್ತು. ಈ ಪೋಲ್ ಜತೆಗೆ ಈ ವಿಚಾರದ ಕುರಿತು ಸದ್ಗುರು ಅಭಿಪ್ರಾಯ ತಿಳಿಸುವ ವೀಡಿಯೋ ಕೂಡ ಪೋಸ್ಟ್ ಮಾಡಲಾಗಿತ್ತು.

ಆದರೆ ನಂತರ ಈ ಪೋಲ್ ಕುರಿತಾದ ಟ್ವೀಟ್ ಮಾಯವಾಗಿತ್ತು. ಆದರೆ ಟ್ವಿಟರ್‍ನಲ್ಲಿ ಕೆಲವರು ಅದರ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ 62 ಶೇ. ಜನರು ಪ್ರತಿಭಟನೆಗಳು ಸರಿ ಎಂದು ಹೇಳಿದ್ದಕ್ಕೆ ಅದನ್ನು ತೆಗೆದು ಹಾಕಲಾಗಿದೆ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ.

ಸಿಎನ್‍ಬಿಸಿ ಆವಾಝ್ ಟಿವಿ ವಾಹಿನಿ ಕೂಡ ಮೋದಿ ಸರಕಾರದ ಕಾರ್ಯನಿರ್ವಹಣೆ ಕುರಿತಾದ ಒಂದು ಪೋಲ್ ನಡೆಸಿದ್ದರೂ ಅದನ್ನು ನಂತರ ಡಿಲೀಟ್ ಮಾಡಿದೆ. ಶೇ.62ರಷ್ಟು ಮಂದಿ ತಮಗೆ ಮೋದಿ ಸರಕಾರದ ಎರಡನೇ ಅವಧಿಯ ಕಾರ್ಯನಿರ್ವಹಣೆ ಖುಷಿ ನೀಡಿಲ್ಲ ಎಂದು ಹೇಳಿದ್ದೇ ಅದನ್ನು ಡಿಲೀಟ್ ಮಾಡಲು ಕಾರಣವೆಂದು ತಿಳಿಯಲಾಗಿದೆ.

ದೈನಿಕ್ ಜಾಗರಣ್ ಹಿಂದಿ ಪತ್ರಿಕೆ ಕೂಡ ಟ್ವಿಟರ್ ಪೋಲ್ ನಡೆಸಿ ಸಿಎಎ ಪ್ರತಿಭಟನೆಗಳು ಮತ ಬ್ಯಾಂಕ್ ರಾಜಕೀಯದ ಪರಿಣಾಮವೇ ಎಂದು ಪ್ರಶ್ನಿಸಿತ್ತು. ಈ ಪೋಲ್ ಫಲಿತಾಂಶದಲ್ಲಿ ಶೇ 54.1ರಷ್ಟು ಮಂದಿ ಮತ ಬ್ಯಾಂಕ್ ರಾಜಕೀಯವಲ್ಲ ಎಂದರೆ ಶೇ 44.1ರಷ್ಟು ಮಂದಿ ಹೌದು ಎಂದಿದ್ದರು.

ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧುರಿ ಕೂಡ ಡಿಸೆಂಬರ್ 24ರಂದು ಟ್ವಿಟರ್ ಪೋಲ್ ನಡೆಸಿ ಜನರು ಸಿಎಎ ಬೆಂಬಲಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಕೇಳಿದ್ದರು. ಸೋಮವಾರದ ತನಕ ಶೇ. 47.7ರಷ್ಟು ಮಂದಿ ಬೆಂಬಲಿಸುವುದಾಗಿ ಹೇಳಿದ್ದರೆ ಶೇ. 52.3ರಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದರು. ಇದೇ ವಿಚಾರದಲ್ಲಿ ಚೌಧುರಿ ನಡೆಸಿದ ಫೇಸ್ ಬುಕ್ ಪೋಲ್‍ನಲ್ಲಿ ಶೇ. 64ರಷ್ಟು ಮಂದಿ  ಬೆಂಬಲಿಸುವುದಿಲ್ಲ ಹಾಗೂ ಶೇ 36ರಷ್ಟು ಮಂದಿ ಬೆಂಬಲಿಸುವುದಾಗಿ ಹೇಳಿದ್ದರು.

ಆದರೆ ತಮ್ಮ ಟ್ವಿಟ್ಟರ್ ಪೋಲ್ ಅನ್ನು ಟ್ರೋಲ್ ಗಳು ದುರುಪಯೋಗ ಪಡಿಸಿ ಸಿಎಎ ವಿರುದ್ಧ ಮತ ನೀಡಿದ್ದರು ಎಂದು ಚೌಧುರಿ ನಂತರ ಆರೋಪಿಸಿದ್ದರು.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News