ಜನರ ಪೌರತ್ವದಲ್ಲಿ ಅಧಿಕಾರಶಾಹಿಯ ಅನಗತ್ಯ ಮಧ್ಯಪ್ರವೇಶ

Update: 2020-01-02 13:17 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಸ್ತಾವಿತ ದೇಶವ್ಯಾಪಿ ಎನ್‍ಆರ್‍ ಸಿ `ಕನಿಷ್ಠ ಸರಕಾರ ಗರಿಷ್ಠ ಆಡಳಿತ'ದ  ಲಕ್ಷಣಗಳಲ್ಲ ಎಂದು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ತರ್ ಡಫ್ಲೊ ಇಂದು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆ ಪ್ರಕಟಿಸಿದ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನರ ಜೀವನಗಳಿಗೆ ಮೂಲಭೂತವಾದಂತಹ ಪೌರತ್ವದಂತಹ ವಿಚಾರದಲ್ಲಿ ಅನಗತ್ಯ ಅಧಿಕಾರಶಾಹಿಯ ಮಧ್ಯಪ್ರವೇಶಕ್ಕೆ ಸಿಎಎ ಹಾಗೂ ಎನ್‍ಆರ್‍ಸಿ ಅನುಮತಿ ನೀಡಲಿದೆ. 'ನೀವು ಜೀವನಪೂರ್ತಿ ಇದ್ದ ದೇಶದ ನಾಗರಿಕರು ನೀವಲ್ಲದೇ ಇದ್ದರೆ ಹಾಗೂ ಬೇರೆ ಯಾರಿಗೂ ನೀವು ಬೇಡವಾದರೆ ನೀವ್ಯಾರು?' ಎನ್ನುವ ಪ್ರಶ್ನೆ ಹಲವು ಯುವ ಜನರನ್ನು ಆತಂಕಕ್ಕೀಡು ಮಾಡಿದೆ ಎಂದು ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

"ವಲಸಿಗರು ಸಮಸ್ಯೆ ಸೃಷ್ಟಿಸುತ್ತಾರೆಂಬ ಭೂತವನ್ನುಆದಷ್ಟು ಬೇಗ ಮತ್ತೆ ಬಾಟಲಿಯೊಳಗೆ ಹಾಕಬೇಕು ಹಾಗೂ ಇದಕ್ಕಾಗಿ ತನ್ನ ಬಾಗಿಲುಗಳನ್ನು ಭಾರತ ಎಲ್ಲರಿಗೂ ತೆರೆಯಬೇಕು ಹಾಗೂ ನಾಗರಿಕತೆಯ ಖನಿಜವಾಗುವ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವವರನ್ನು, ಸಹಿಷ್ಣುಗಳನ್ನು ಹಾಗೂ ಸರ್ವರನ್ನೊಳಗೊಂಡ ಅಭಿವೃದ್ಧಿ ಪರ ಇರುವವರಿಗೆ ನಮ್ಮ ಬಾಗಿಲುಗಳನ್ನು ನಾವೇಕೆ ತೆರೆಯಬಾರದು, ಭಾರತವೇಕೆ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೀಡಾಗಿರುವ ಅಹ್ಮದಿಗಳು ಅಥವಾ ಶ್ರೀಲಂಕಾದ ಹಿಂದು ತಮಿಳರಿಗೆ  ಪ್ರವೇಶ ನೀಡಬಾರದು?, ನಾವು 130 ಕೋಟಿ ಜನರಿದ್ದೇವೆ ಹಾಗೂ ಇನ್ನು ಕೆಲ ಲಕ್ಷ ಜನರು ಅದರಲ್ಲಿ ಸೇರಿಕೊಳ್ಳುತ್ತಾರೆ ಹಾಗೂ ನಾವು ನಿಜವಾಗಿಯೂ ಜಗತ್ತಿಗೆ ಧ್ರುವತಾರೆಯಾಗುತ್ತೇವೆ'' ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News