ಹೊಸ ವರ್ಷದ ಹಾರುವ ಲಾಟೀನುಗಳಿಗೆ ಮೃಗಾಲಯದ ಮಂಗಗಳು ಬಲಿ

Update: 2020-01-02 15:50 GMT
ಸಾಂದರ್ಭಿಕ ಚಿತ್ರ

ಬರ್ಲಿನ್, ಜ. 2: ಹೊಸ ವರ್ಷದ ಮುನ್ನಾ ದಿನ ಹಾರಿಸಿಬಿಟ್ಟ ಹಾರುವ ದೀಪಗಳ ಜ್ವಾಲೆಯಿಂದ ಹುಟ್ಟಿಕೊಂಡ ಬೆಂಕಿಯು ವಾಯುವ್ಯ ಜರ್ಮನಿಯ ಪ್ರಾಣಿಸಂಗ್ರಹಾಲಯವೊಂದರಲ್ಲಿದ್ದ ಹತ್ತಾರು ಮಂಗಗಳ ಸಾವಿಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಂಗಳವಾರ ಮಧ್ಯ ರಾತ್ರಿಗೆ ಸ್ವಲ್ಪವೇ ಮುನ್ನ ಪ್ರಾಣಿ ಸಂಗ್ರಹಾಲಯದ ಮಂಗಗಳ ವಿಭಾಗದಲ್ಲಿ ಹಬ್ಬಿದ ಬೆಂಕಿಗೆ ಕನಿಷ್ಠ 30 ಮಂಗಗಳು ಬಲಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದಲ್ಲಿ ಗೊರಿಲ್ಲಾಗಳು, ಒರಾಂಗುಟಾನ್‌ಗಳು, ಚಿಂಪಾಂಜಿಗಳು ಮತ್ತು ಅತಿ ಚಿಕ್ಕ ಮಾರ್ಮಸೆಟ್ ಮಂಗಗಳಿದ್ದವು.

ಹಾರುವ ಕಾಗದದ ಲಾಟೀನುಗಳಿಂದಾಗಿ ಮೃಗಾಲಯದಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News