×
Ad

ಜೆಎನ್‌ಯು ಘಟನೆ 26/11 ಮುಂಬೈ ಮೇಲೆ ಭಯೋತ್ಪಾದಕರ ದಾಳಿಯನ್ನು ನೆನಪಿಸಿದೆ: ಉದ್ಧವ್ ಠಾಕ್ರೆ

Update: 2020-01-06 14:12 IST

ಮುಂಬೈ, ಜ.6: ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ನನಗೆ  ಮುಂಬೈ ಮೇಲೆ  26/11 ಭಯೋತ್ಪಾದಕರ  ದಾಳಿಯನ್ನು ನೆನಪಿಸಿತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿ ರವಿವಾರ ಸಂಜೆ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಠಾಕ್ರೆ ದಾಳಿಕೋರರನ್ನು 'ಹೇಡಿಗಳು' ಎಂದು ಕರೆದರು., "ಜೆಎನ್‌ಯುನಲ್ಲಿ ಮುಸುಕುಧಾರಿ  ದಾಳಿಕೋರರು ಹೇಡಿಗಳು, ಅವರ ಗುರುತನ್ನು ಬಹಿರಂಗಪಡಿಸಬೇಕು ಎಂದರು.

ಮಹಾರಾಷ್ಟ್ರದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ, (ಅವರನ್ನು)  ಅವರನ್ನು ನೋಯಿಸುವ ಯಾವುದೇ ಕ್ರಮವನ್ನು ನಾವು ಸಹಿಸುವುದಿಲ್ಲ. "

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News