ಜರ್ಮನಿ ನಾಝಿ ಆಳ್ವಿಕೆಯತ್ತ ಹೊರಳಿದ್ದನ್ನು ನೆನಪಿಸುವಂತಿದೆ: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ
Update: 2020-01-06 20:21 IST
ಹೊಸದಿಲ್ಲಿ, ಜ. 6: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಏನು ನಡೆಯಿತು ಎಂಬುದನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನಮಗೆ ತಿಳಿಸಬೇಕು ಎಂದು ಜೆಎನ್‌ಯುನ ಹಳೆ ವಿದ್ಯಾರ್ಥಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.
ವಿಶ್ವದಲ್ಲಿ ದೇಶದ ವರ್ಚಸ್ಸಿನ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ಭಾರತೀಯ ಕೂಡ ಚಿಂತಿಸಬೇಕಾದ ವಿಚಾರ ಇದು. ಜರ್ಮನಿಯು ನಾಝಿ ಆಳ್ವಿಕೆಯತ್ತ ಹೊರಳುತ್ತಿರುವ ಸಂದರ್ಭ ಸಂಭವಿಸಿದ ಸನ್ನಿವೇಶವನ್ನು ಇದು ಪ್ರತಿಧ್ವನಿಸುತ್ತಿದೆ ಎಂದು ಅವರು ಹೇಳಿದರು.
ಏನು ನಡೆಯಿತು ಎಂಬ ಸತ್ಯವನ್ನು ಸರಕಾರ ಬಹಿರಂಗಪಡಿಸಬೇಕಾದ ಅಗತ್ಯ ಇದೆ. ಪ್ರತ್ಯಾರೋಪದ ಧ್ವನಿಗಳಲ್ಲಿ ಇದು ಮುಳುಗಲು ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು.
‘‘ಘಟನೆಯಲ್ಲಿ ಗಾಯಗೊಂಡವರ ಬಗ್ಗೆ ನನಗೆ ನಿಜವಾಗಲೂ ಕಾಳಜಿ ಇದೆ. ಗಾಯಗೊಂಡ ಪ್ರತಿಯೊಬ್ಬರೂ ಶೀಘ್ರ ಗುಣಮುಖವಾಗಲಿ ಎಂದು ಹಾರೈಸುತ್ತೇನೆ’’ ಎಂದು ಅವರು ಹೇಳಿದರು.