ಜೆಎನ್ ಯು ಮೇಲೆ 'ಫ್ಯಾಶಿಸ್ಟ್ ದಾಳಿ' ಬಗ್ಗೆ ರಾಹುಲ್ ಟ್ವೀಟ್: ಹೆಗಲು ಮುಟ್ಟಿ ನೋಡಿದ ರಾಜ್ಯ ಬಿಜೆಪಿ!

Update: 2020-01-07 16:49 GMT

ಬೆಂಗಳೂರು: ಜೆಎನ್ ಯು ಕ್ಯಾಂಪಸ್ ನೊಳಕ್ಕೆ ನುಗ್ಗಿ ಗೂಂಡಾಗಳು ನಡೆಸಿದ ದಾಳಿಯನ್ನು ಖಂಡಿಸಿದ್ದ ರಾಹುಲ್ ಗಾಂಧಿಯವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಇದೀಗ ಪೇಚಿಗೆ ಸಿಲುಕಿದೆ.

ಜೆಎನ್ ಯು ಮೇಲಿನ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್, "ಜೆಎನ್ ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಮುಖ ಮುಚ್ಚಿದ ಗೂಂಡಾಗಳು ದಾಳಿ ನಡೆಸಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಆಘಾತಕಾರಿ. ನಮ್ಮ ದೇಶದ ಹಿಡಿತವಿರುವ ಫ್ಯಾಶಿಸ್ಟರು ನಮ್ಮ ವೀರ ವಿದ್ಯಾರ್ಥಿಗಳ ಧ್ವನಿಗೆ ಹೆದರಿದ್ದಾರೆ" ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, "ಯಾವುದೇ ತನಿಖೆ ನಡೆಯುವ ಮೊದಲೇ ಜೆಎನ್ ಯು ಮೇಲೆ ದಾಳಿ ನಡೆಸಿದ ಮುಖ ಮುಚ್ಚಿದ ದುಷ್ಕರ್ಮಿಗಳು ಫ್ಯಾಶಿಸ್ಟರು ಎಂದು ರಾಹುಲ್ ನಿರ್ಧರಿಸಿದ್ದಾರೆ" ಎಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರಿಗರೊಬ್ಬರು, "ರಾಹುಲ್ ಗಾಂಧಿ ಫ್ಯಾಶಿಸ್ಟರು ಎಂದು ಹೇಳಿದರೆ ಬಿಜೆಪಿಯೇಕೆ ತನ್ನ ಹೆಗಲು ನೋಡುತ್ತಿದೆ?. ಪರೋಕ್ಷವಾಗಿ ಬಿಜೆಪಿಯು ಅವರು ಫ್ಯಾಶಿಸ್ಟರು ಎಂದು ಒಪ್ಪಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News