2020ರಲ್ಲಿ ಜಿಡಿಪಿ ಶೇ.5ಕ್ಕೆ ಕುಸಿಯುವ ನಿರೀಕ್ಷೆ: 11 ವರ್ಷಗಳಲ್ಲೇ ಕನಿಷ್ಠ

Update: 2020-01-07 16:46 GMT

ಹೊಸದಿಲ್ಲಿ, ಜ.7: 2019-20ರ ವಿತ್ತ ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ ಶೇ. 5ರ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಸರಕಾರದ ಅಂಕಿಅಂಶ ಇಲಾಖೆ ಅಂದಾಜಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅರ್ಥವ್ಯವಸ್ಥೆಯ ಪ್ರಗತಿ ದರ ಶೇ. 6.8ರ ಪ್ರಮಾಣದಲ್ಲಿತ್ತು.

ಜಿಡಿಪಿ (ಒಟ್ಟು ದೇಶೀಯ ಉತ್ಪನ್ನದ ಪ್ರಮಾಣ) ಶೇ.5ಕ್ಕೆ ಕುಸಿಯಲಿದೆ. ಉತ್ಪಾದನಾ ಕ್ಷೇತ್ರದಲ್ಲಿ ಮಂದಗತಿಯ ಅಭಿವೃದ್ಧಿ ಜಿಡಿಪಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. 2019-20ರಲ್ಲಿ ಉತ್ಪಾದನಾ ಕ್ಷೇತ್ರದ ಪ್ರಗತಿ 2%ಕ್ಕೆ ಕುಸಿಯಲಿದೆ(ಕಳೆದ ವರ್ಷ 6.2% ಇತ್ತು) ಎಂದು ರಾಷ್ಟ್ರೀಯ ಅಂಕಿಅಂಶ ಇಲಾಖೆ ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಕೃಷಿ, ನಿರ್ಮಾಣ ಕ್ಷೇತ್ರ, ವಿದ್ಯುಚ್ಛಕ್ತಿ, ಅನಿಲ ಮತ್ತು ನೀರು ಪೂರೈಕೆ ಕ್ಷೇತ್ರದಲ್ಲೂ ಮಂದಗತಿಯ ಪ್ರಗತಿಯಾಗಿದೆ. ಆದರೆ ಗಣಿಗಾರಿಕೆ, ಸಾರ್ವಜನಿಕ ಆಡಳಿತ, ರಕ್ಷಣೆ ಸಹಿತ ಕೆಲವು ಕ್ಷೇತ್ರಗಳಲ್ಲಿ ಅಲ್ಪಪ್ರಮಾಣದ ಸುಧಾರಣೆಯಾಗಿದೆ ಎಂದು ವರದಿ ತಿಳಿಸಿದೆ. ಈ ಬೆಳವಣಿಗೆ ದರವು 11 ವರ್ಷಗಳಲ್ಲೇ ಕನಿಷ್ಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News