ನ್ಯೂಝಿಲ್ಯಾಂಡ್ ಪ್ರವಾಸ ಸರಣಿ ಕಠಿಣ, ಆದರೆ ನಾನು ಸಿದ್ಧನಾಗಿದ್ದೇನೆ

Update: 2020-01-08 05:08 GMT

ಹೊಸದಿಲ್ಲಿ, ಜ.7: ನ್ಯೂಝಿಲ್ಯಾಂಡ್ ಪ್ರವಾಸ ಸರಣಿ ಅಷ್ಟೊಂದು ಸುಲಭವಲ್ಲ. ಆದರೆ ಸರಣಿಗೆ ನಾನು ಸಿದ್ಧನಾಗಿದ್ದೇನೆ ಎಂದು ಟೀಮ್ ಇಂಡಿಯಾದ ಅಗ್ರ ಸರದಿಯ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.

  ನ್ಯೂಝಿಲ್ಯಾಂಡ್‌ನಲ್ಲಿ ಆಡುವುದು ದೊಡ್ಡ ಸವಾಲು. ನ್ಯೂಝಿಲ್ಯಾಂಡ್ ಕಠಿಣ ಸ್ಥಳಗಳಲ್ಲಿ ಒಂದಾಗಿದೆ.

    

 ಮುಂದಿನ ತಿಂಗಳು ನ್ಯೂಝಿಲ್ಯಾಂಡ್‌ನಲ್ಲಿ ಎದುರಾಗಲಿರುವ ಸವಾಲನ್ನು ಎದುರಿಸಲು ತಯಾರಿ ನಡೆಸಿರುವುದಾಗಿ ಶರ್ಮಾ ತಿಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ್ದ ಓಪನರ್ ರೋಹಿತ್ ಶರ್ಮಾ ಫೆಬ್ರವರಿಯಲ್ಲಿ ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್ ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಅವರನ್ನೊಳಗೊಂಡ ಕಿವೀಸ್ ಬೌಲರ್‌ಗಳ ದಾಳಿಯನ್ನು ಎದುರಿಸಲಿದ್ದಾರೆ. ನ್ಯೂಝಿಲ್ಯಾಂಡ್ ಕ್ರಿಕೆಟ್ ಆಡಲು ಸುಲಭವಾದ ಸ್ಥಳವಲ್ಲ. ಕಳೆದ ಬಾರಿ ನಾವು ಟೆಸ್ಟ್ ಸರಣಿ ಯಲ್ಲಿ (0-1) ಸೋತಿದ್ದೇವೆ. ಆದರೆ ನಾವು ಉತ್ತಮ ಹೋರಾಟವನ್ನು ನೀಡಿದ್ದೇವೆ. ಆದರೆ ನಮ್ಮ ಬೌಲಿಂಗ್ ದಾಳಿಯು ಈ ಬಾರಿ ನಾವು ಹಿಂದೆ ಹೊಂದಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ರೋಹಿತ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ನನಗೆ ವೈಯಕ್ತಿಕವಾಗಿ, ಹೊಸ ಬಾಲ್ ಬೌಲರ್‌ಗಳನ್ನು ಮತ್ತು ಮಧ್ಯಮ ಸರದಿಯಲ್ಲಿ ಬೌಲಿಂಗ್ ಮಾಡುವ ಬೌಲರ್‌ಗಳನ್ನು ಎದುರಿಸುವುದು ನಿಸ್ಸಂದೇಹವಾಗಿ ಒಂದು ಸವಾಲಾಗಿದೆ

    ಭಾರತದ ಹೊರಗೆ ಬೌಲಿಂಗ್ ಸ್ವಿಂಗ್ ಮತ್ತು ಸೀಮ್ ಆಗಿರುತ್ತದೆ ಎಂದು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿ ಯಲ್ಲಿ ಬೌಲಿಂಗ್ ಉಪಭೂಖಂಡದಲ್ಲಿ ನಿರೀಕ್ಷಿಸದ ರೀತಿ ಇತ್ತು. ಯಾವುದೇ ಪರಿಸ್ಥಿತಿಯಲ್ಲಿ ಹೊಸ ಚೆಂಡನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಖಂಡಿತವಾಗಿಯೂ ಭಾರತದ ಹೊರಗೆ ತುಂಬಾ ಕಠಿಣವಾಗಿದೆ. ಆದರೆ, ನಾವು ಮೂರು ಟೆಸ್ಟ್ ಆಡಿದ್ದೇವೆ. ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ಎರಡನೇ ಟೆಸ್ಟ್‌ನಲ್ಲಿ ಆಗಿರುವಂತೆ ಭಾರತದಲ್ಲಿ ಚೆಂಡು ಸ್ವಿಂಗ್ ಆಗುವುದನ್ನು ನಾನು ನೋಡಿಲ್ಲ ಎಂದು ನೆನಪಿಸಿಕೊಂಡರು.

  ರೋಹಿತ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧದ ನ್ಯೂಝಿಲ್ಯಾಂಡ್ ಸರಣಿಯನ್ನು ಆಸಕ್ತಿ ಯಿಂದ ಗಮನಿ ಸುತ್ತಿದ್ದಾರೆ. ನ್ಯೂಝಿಲ್ಯಾಂಡ್ 0-3 ಅಂತರದಿಂದ ಸುಲಭವಾಗಿ ಸೋಲನುಭವಿಸಿದ್ದರೂ ಕೂಡಾ ಅದರ ಬೌಲಿಂಗ್ ವಿಭಾಗವು ಹೆಚ್ಚು ಸ್ಥಿರವಾಗಿದೆ ಎಂಬ ಅಂಶವನ್ನು ಗಮನಿಸಿದ್ದಾರೆ. ಪ್ರಾಮಾಣಿಕವಾಗಿ, ವಾಸ್ತವವಾಗಿ, ಇದೀಗ ನನ್ನ ವೃತ್ತಿಜೀವನದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಅದರಿಂದ ನನಗೆ ಸಂತೋಷವಾಗಿದೆ. ಈ ಹಿಂದೆ ಏನಾದರೂ ಸಂಭವಿಸಿದರೂ, ನನಗೆ ಅದನ್ನು ಬದಲಾ ಯಿಸಲು ಸಾಧ್ಯವಿಲ್ಲ. ಆದರೆ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿಯಲು ಅವಕಾಶ ಸಿಕ್ಕಿರು ವುದಕ್ಕೆ ನನಗೆ ಸಂತೋಷ ವಾಗಿದೆ ಎಂದರು. ರೋಹಿತ್ ಬ್ಯಾಟಿಂಗ್‌ನ್ನು ಮೊದಲಿಗಿಂತ ಉತ್ತಮವಾಗಿ ಅರ್ಥಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಅವರು ದಾಖಲಿಸಿರುವ 2442 ರನ್ ಸಾಕ್ಷಿಯಾಗಿದೆ. ನೀವು ಉತ್ತಮ ವಾಗಿ ಆಡುತ್ತಿದ್ದರೆ ಮೈಲಿಗಲ್ಲು ಗಳನ್ನು ಸರಿಯಾಗಿ ತಲುಪ ಬಹುದು ಎಂಬ ವಿಚಾರವನ್ನು ನಾನು ಅರ್ಥಮಾಡಿಕೊಂಡಿದ್ದೇನೆ.ಹಿಂದೆ ಇದ್ದದ್ದಕ್ಕಿಂತ ಉತ್ತಮವಾಗಿ ಆಡುವ ಯೋಜನೆ ಮಾಡಿದ್ದೇನೆ. ಈಗ ಪರಿಸ್ಥಿತಿಗಳು ಬದಲಾಗುತ್ತಿವೆ. ಶ್ರೇಯಸ್ ಅಯ್ಯರ್ ಈಗ 4ನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ರಿಷಭ್‌ಪಂತ್ ವೆಸ್ಟ್ ಇಂಡೀಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

     ಏಕದಿನ ಪಂದ್ಯಗಳಲ್ಲಿ ಶಿವಂ ದುಬೆ ಉತ್ತಮವಾಗಿ ಆಡಲು ಪ್ರಾರಂಭಿಸಿದ್ದಾರೆ. ಆದ್ದರಿಂದ, ನನಗೆ ವಿಶ್ವಾಸವಿದೆ. ನಮ್ಮ ಯುವಕರು ದೃಢ ಹೆಜ್ಜೆ ಇಡುತ್ತಾರೆ ಎಂದು 33 ವರ್ಷದ ರೋಹಿತ್ ಹೇಳಿದರು.

  ಲೋಕೇಶ್ ರಾಹುಲ್, ರಿಷಭ್, ಶ್ರೇಯಸ್ ಮತ್ತು ಶಿವಂ ಒಟ್ಟಿಗೆ ಅನೇಕ ಪಂದ್ಯಗಳನ್ನು ಆಡಿಲ್ಲ. ಇದೊಂದು ಸಮಸ್ಯೆಯಾಗಿದೆ. ಆದರೆ ಈಗ ಅವರು ಜೊತೆಯಾಗಿದ್ದಾರೆ. ಮುಂದೆ ಈ ಸಮಸ್ಯೆ ನಿವಾರಣೆಯಾಗಲಿದೆ. ಅವರ ಆತ್ಮವಿಶ್ವಾಸ ಗಳಿಸಲಿದ್ದಾರೆ. ಅಯ್ಯರ್ ಈಗ ಹೆಚ್ಚು ನಿರ್ಭಯವಾಗಿ ಆಡಲಿದ್ದಾರೆ ಎಂಬ ವಿಶ್ವಾಸವಿದೆ, ಏಕೆಂದರೆ ಅವರು ಬಹುತೇಕ ನಂ .4 ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News