×
Ad

ವಿಮಾನ ಪತನಕ್ಕೆ ಪೈಲಟ್ ಪ್ರಮಾದ ಕಾರಣವಲ್ಲ: ಉಕ್ರೇನ್

Update: 2020-01-08 22:37 IST

ಮಾಸ್ಕೊ,ಜ.8: ಪೈಲಟ್‌ನ ಪ್ರಮಾದದಿಂದಾಗಿ ಉಕ್ರೇನ್‌ನ ಬೋಯಿಂಗ್ 737 ವಿಮಾನ ಪತನಗೊಂಡಿರುವ ಸಾಧ್ಯತೆಯಿಲ್ಲವೆಂದು ಉಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.

ವಿಮಾನವು ಅವಘಡಕ್ಕೀಡಾದಾಗ ಅದು ನೆಲದಿಂದ 2400 ಮೀಟರ್ ಎತ್ತರದಲ್ಲಿತ್ತು. ಅವಘಡದಲ್ಲಿ ವಿಮಾನ ಸಿಬ್ಬಂದಿಯಿಂದ ಪ್ರಮಾವಾಗಿರುವ ಸಾಧ್ಯತೆ ಅತ್ಯಂತ ಕನಿಷ್ಠವಾಗಿದೆ. ನಾವು ಅದನ್ನು ಪರಿಗಣಿಸುವುದಿಲ್ಲ. ಪೈಲಟ್‌ಗಳ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ ಅರ ಲೋಪದಿಂದಾಗಿ ಅವಘಡ ನಡೆಯಿತೆಂದು ಹೇಳಲು ಸಾಧ್ಯವಿಲ್ಲವೆಂದು ಉಕ್ರೇನ್ ಇಂಟರ್‌ನ್ಯಾಶನಲ್ ಸಂಸ್ಥೆಯ ವರಿಷ್ಠ ಇಗೊರ್ ಸೊಸ್ನೊವ್‌ಸ್ಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News