ಇರಾನ್: ಅಣುಸ್ಥಾವರ ಪ್ರದೇಶ ಸಮೀಪದಲ್ಲೇ ಭೂಕಂಪನ
Update: 2020-01-08 22:53 IST
ಟೆಹರಾನ್,ಜ.8: ಇರಾನ್‌ನಲ್ಲಿ ಬುಧವಾ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ದಾಖಲಿಸಿರು ಭೂಕಂಪದ ಕೇಂದ್ರ ಬಿಂದು ಇರಾನ್‌ನ ದಕ್ಷಿಣದ ನೈಋತ್ಯದಲ್ಲಿರುವ ಬೊರಾಝಾನ್ ನಗರದಲ್ಲಿ ನೆಲದಿಂದ 10 ಕಿ.ಮೀ. ಆಳದಲ್ಲಿತ್ತು. ಇರಾನ್‌ನ ಬುಶೆಹರ್‌ನಲ್ಲಿರುವ ಅಣುಸ್ಥಾವರದಿಂದ ಕೇವಲ 50 ಕಿ.ಮೀ. ದೂರದಲ್ಲಿ ಭೂಕಂಪನವಾಗಿರುವುದಾಗಿ ಅಮೆರಿಕದ ಭೂಕಂಪನ ಕಣ್ಗಾವಲು ಸಂಸ್ಥೆ ತಿಳಿಸಿದೆ.
ಇರಾನ್‌ನ ಅಧಿಕೃತ ಸುದ್ದಿಸಂಸ್ಥೆ ಇರ್ನಾ ಕೂಡಾ, ದೇಶದ ಏಕೈಕ ಅಣುಸ್ತಾವರವಿರುವ ಬುಶೆಹರ್ ಸಮೀಪವೇ ಭೂಮಿ ಕಂಪಿಸಿರುವುದನ್ನು ದೃಢಪಡಿಸಿದೆ.