ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದ ಪಿಡಿಪಿಯ ಎಂಟು ನಾಯಕರ ಉಚ್ಚಾಟನೆ

Update: 2020-01-09 15:02 GMT
file photo

ಶ್ರೀನಗರ,ಜ.9: ಸರಕಾರದೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಜನರ ಇಚ್ಛೆಯ ವಿರುದ್ಧ ನಡೆದುಕೊಂಡಿದ್ದಕ್ಕಾಗಿ ಪಕ್ಷದ ಎಂಟು ನಾಯಕರನ್ನು ಮೆಹಬೂಬ ಮುಫ್ತಿಯವರ ಪಿಡಿಪಿಯು ಗುರುವಾರ ಉಚ್ಚಾಟನೆಗೊಳಿಸಿದೆ.

ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದೆ. ಉಚ್ಚಾಟನೆಗೊಂಡಿರುವ ಎಲ್ಲ ಎಂಟೂ ನಾಯಕರು ಮಾಜಿ ಶಾಸಕರಾಗಿದ್ದಾರೆ.

ಉಚ್ಚಾಟಿತ ನಾಯಕರು ಮಾಜಿ ಪಿಡಿಪಿ ನಾಯಕ ಸೈಯದ್ ಅಲ್ತಾಫ್ ಬುಖಾರಿ ಅವರ ಬೆಂಬಲಕ್ಕೆ ನಿಂತಿದ್ದು, ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಜಿ.ಸಿ ಮುರ್ಮು ಅವರನ್ನು ಭೇಟಿಯಾಗಿದ್ದ ನಿಯೋಗದ ಸದಸ್ಯರಾಗಿದ್ದರು.

ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಗಾಗಿ ಗುರುವಾರ ಇಲ್ಲಿಗೆ ಆಗಮಿಸಿರುವ 15 ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳನ್ನೂ ಈ ನಾಯಕರು ಭೇಟಿಯಾಗಿದ್ದರು. ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಇದು ವಿದೇಶಿ ರಾಜತಾಂತ್ರಿಕರ ಮೊದಲ ಕಾಶ್ಮೀರ ಭೇಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News