×
Ad

ಶುಲ್ಕ ಹೆಚ್ಚಳ ಎಚ್‌ಆರ್‌ಡಿ ಸಚಿವಾಲಯದ ಸೂತ್ರಕ್ಕನುಗುಣವಾಗಿದೆ:ಜೆಎನ್‌ಯು ಕುಲಪತಿ

Update: 2020-01-09 21:17 IST

ಹೊಸದಿಲ್ಲಿ,ಜ.9: ಶುಲ್ಕ ಹೆಚ್ಚಳ ಕುರಿತಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕಳೆದ ತಿಂಗಳು ರೂಪಿಸಿದ್ದ ಸೂತ್ರವನ್ನು ಪಾಲಿಸಲಾಗಿದೆ ಮತ್ತು ಈ ಮುನ್ನ ನಿರ್ಧರಿಸಿದಂತೆ ವಿದ್ಯಾರ್ಥಿಗಳಿಗೆ ಯಾವುದೇ ಸೇವಾ ಅಥವಾ ಬಳಕೆ ಶುಲ್ಕವನ್ನು ವಿಧಿಸಲಾಗುತ್ತಿಲ್ಲ ಎಂದು ಜೆಎನ್‌ಯು ವಿವಿಯ ಕುಲಪತಿ ಎಂ.ಜಗದೀಶ್ ಕುಮಾರ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಸೇವಾ ಮತ್ತು ಬಳಕೆ ಶುಲ್ಕಗಳನ್ನು ಭರಿಸಿಕೊಳ್ಳಲು ಹಣಕಾಸು ಬಿಡುಗಡೆ ಮಾಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಕ್ಕೆ ಪತ್ರವನ್ನೂ ಬರೆದಿದ್ದೇವೆ ಎಂದೂ ಅವರು ಹೇಳಿದರು.

ಉದ್ದೇಶಿತ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶದ ನಡುವೆಯೇ ಕಳೆದ ತಿಂಗಳು ಮಾನವ ಸಂಪನ್ಮೂಲ ಸಚಿವಾಲಯವು ಬಿಕ್ಕಟ್ಟನ್ನು ಬಗೆಹರಿಸಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ನಿರ್ಧಾರಿತ ಸೂತ್ರದಂತೆ ಸೇವಾ ಮತ್ತು ಬಳಕೆ ಶುಲ್ಕಗಳನ್ನು ವಿದ್ಯಾರ್ಥಿಗಳ ಬದಲು ಯುಜಿಸಿಯು ಭರಿಸಬೇಕಿತ್ತು ಮತ್ತು ವಿದ್ಯಾರ್ಥಿಗಳು ಕೇವಲ ಹಾಸ್ಟೆಲ್ ಕೋಣೆಯ ಬಾಡಿಗೆಯನ್ನು ಪಾವತಿಸಬೇಕಿತ್ತು. ಆದರೆ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News