ಸಿಎಎ ಶುಕ್ರವಾರದಿಂದ ಜಾರಿಗೊಂಡಿದೆ: ಕೇಂದ್ರ ಸರಕಾರ
Update: 2020-01-10 23:39 IST
ಹೊಸದಿಲ್ಲಿ,ಜ.10: ಭಾರತದಲ್ಲಿ ಮೊದಲ ಬಾರಿಗೆ ಧರ್ಮವನ್ನು ಪೌರತ್ವಕ್ಕೆ ಮಾನದಂಡವನ್ನಾಗಿ ಮಾಡಿರುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಶುಕ್ರವಾರದಿಂದ ಜಾರಿಗೊಂಡಿದೆ. ಧಾರ್ಮಿಕ ಕಿರುಕುಳಗಳಿಂದಾಗಿ ಡಿಸೆಂಬರ್ 31,2014ರೊಳಗೆ ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ಗಳಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಮಾತ್ರ ಪೌರತ್ವವನ್ನು ನೀಡುವ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಕಾಯ್ದೆಯನ್ನು ಅನುಷ್ಠಾನಿಸಿ ಕೇಂದ್ರ ಗೃಹಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಸತ್ತು ಸಿಎಎ ಅನ್ನು ಅಂಗೀಕರಿಸಿತ್ತು.
ಗೃಹ ಸಚಿವಾಲಯವು ಸಿಎಎ ಕಾಯ್ದೆಯ ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಿದೆ.