ಒಮಾನ್‌ ದೊರೆ ಖಬೂಸ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Update: 2020-01-11 16:29 GMT

ಹೊಸದಿಲ್ಲಿ,ಜ.11: ಒಮಾನ್‌ನ ದೊರೆ ಸುಲ್ತಾನ್ ಖಾಬೂಸ್ ಬಿನ್ ಸಯೀದ್ ಅಲ್ ಸಯೀದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಲ್ತಾನ್ ಖಾಬೂಸ್ ಅವರು ಶಾಂತಿಯ ಧ್ಯೋತಕವಾಗಿದ್ದರು ಎಂದು ಅವರು ಬಣ್ಣಿಸಿದ್ದಾರೆ.

ಸುಲ್ತಾನ್ ಖಾಬೂಸ್ ಅವರು ಭಾರತದ ನೈಜ ಮಿತ್ರನಾಗಿದ್ದರು ಹಾಗೂ ಭಾರತ ಹಾಗೂ ಒಮಾನ್ ನಡುವೆ ಸ್ಪಂದನಾಶೀಲ ಹಾಗೂ ಆಯಕಟ್ಟಿನ ಪಾಲು ದಾರಿಕೆಯನ್ನು ಅಭಿವೃದ್ಧಿಪಡಿಸಲು ಅವರು ಬಲವಾದ ನಾಯಕತ್ವ ಒದಗಿಸಿದ್ದರು. ನನಗೆ ಅವರು ನೀಡಿದ ಪ್ರೀತ್ಯಾದರವನ್ನು ನಾನು ಸದಾ ಸ್ಮರಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 ದೂರದೃಷ್ಟಿಯ ನಾಯಕ ಹಾಗೂ ಮುತ್ಸದ್ದಿಯಾದ ಸುಲ್ತಾನ್ ಖಬೂಸ್ ಅವರು ಓಮಾನ್ ದೇಶವನ್ನು ಆಧುನಿಕ ಹಾಗೂ ಪ್ರಗತಿಪರ ರಾಷ್ಟ್ರವಾಗಿ ಪರಿವರ್ತಿಸಿದ್ದಾರೆಂದು ಪ್ರಧಾನಿ ಟ್ವೀಟಿಸಿದ್ದಾರೆ.

79 ವರ್ಷ ವಯಸ್ಸಿನ ಸುಲ್ತಾನ್ ಖಬೂಸ್ ಅವರು ಶುಕ್ರವಾರ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News