ಪೊಲೀಸ್‌ ಠಾಣೆಯಿಂದಲೇ 185 ಮೊಬೈಲ್ ಫೋನ್‌ಗಳನ್ನು ದೋಚಿದ ಕಳ್ಳರು!

Update: 2020-01-12 16:21 GMT

ಪುಣೆ,ಜ.12: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಪೊಲೀಸ್ ಠಾಣೆಯೊಂದರ ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ 185 ಮೊಬೈಲ್‌ಫೋನ್ ಹ್ಯಾಂಡ್‌ಸೆಟ್‌ಗಳು ಗುರುವಾರ ರಾತ್ರಿ ಕಳವಾಗಿವೆಯೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

  ಕೊಲ್ಲಾಪುರದಿಂದ 38 ಕಿ.ಮೀ. ದೂರದ ಜಯಸಿಂಗಪುರ ಪೊಲೀಸ್‌ಠಾಣೆಯಲ್ಲಿ ಮೊಬೈಲ್‌ಫೋನ್‌ಗಳ ಕಳ್ಳತನವಾಗಿರುವುದಾಗಿ  ಅವರು ಹೇಳಿದ್ದಾರೆ.

ವಿವಿಧ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಈ ಮೊಬೈಲ್‌ಪೋನ್‌ಗಳನ್ನು ಪೊಲೀಸರು ಠಾಣೆಯ ವಿಶೇಷ ಕೊಠಡಿಯಲ್ಲಿ ಇರಿಸಿದ್ದರು.

 ಗುರುವಾರ ರಾತ್ರಿ ಕೆಲವು ಅಪರಿಚಿತ ವ್ಯಕ್ತಿಗಳು ಕೊಠಡಿಯೊಳಗೆ ನುಗ್ಗಿ, ಸುಮಾರು 185 ಮೊಬೈಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News