×
Ad

ಅಮೆರಿಕದ ಸೈನಿಕರಿರುವ ಇರಾಕ್ ನ ವಾಯುನೆಲೆಯ ಮೇಲೆ ಅಪ್ಪಳಿಸಿದ 4 ರಾಕೆಟ್ ಗಳು

Update: 2020-01-12 22:29 IST

ಬಾಗ್ದಾದ್,ಜ.12: ಅಮೆರಿಕದ ಸೈನಿಕರಿದ್ದ ಇರಾಕ್‌ನ ಬಲಾದ್ ವಾಯುನೆಲೆಗೆ ರವಿವಾರ ನಾಲ್ಕು ರಾಕೆಟ್‌ಗಳು ಅಪ್ಪಳಿಸಿದ್ದು,ನಾಲ್ವರು ಇರಾಕಿ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಾರ್ಟರ್ ಬಾಂಬ್‌ಗಳು ವಾಯುನೆಲೆಯಲ್ಲಿನ ರನ್‌ವೇ ಮೇಲೆ ಬಿದ್ದವು ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಬಲಾದ್ ವಾಯುನೆಲೆ ಬಾಗ್ದಾದ್‌ನಿಂದ 80 ಕಿ.ಮೀ.ಅಂತರದಲ್ಲಿದೆ.

ಮೂರು ದಿನಗಳ ಹಿಂದಷ್ಟೇ ಇರಾಕಿನ ಉಸ್ತುವಾರಿ ಪ್ರಧಾನಿ ಆದೆಲ್ ಅಬ್ದೆಲ್ ಮಹ್ದಿ ಅವರು ಸಂಸತ್ತಿನ ನಿರ್ಣಯದಂತೆ ಸೈನಿಕರ ಹಿಂದೆಗತಕ್ಕೆ ಸಿದ್ಧತೆಗಳನ್ನು ಆರಂಭಿಸಲು ಮಾತುಕತೆಗಾಗಿ ನಿಯೋಗವೊಂದನ್ನು ಬಾಗ್ದಾದ್‌ಗೆ ಕಳುಹಿಸುವಂತೆ ಅಮೆರಿಕಕ್ಕೆ ಸೂಚಿಸಿದ್ದರು.

ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತೆ ತಲೆಯೆತ್ತುವುದನ್ನು ತಡೆಯುವಲ್ಲಿ ಸ್ಥಳೀಯ ಸೈನಿಕರಿಗೆ ನೆರವಾಗಲು ಅಮೆರಿಕದ ಸುಮಾರು 5,200 ಸೈನಿಕರು ಇರಾಕಿನ ವಿವಿಧ ವಾಯುನೆಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News