×
Ad

ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಾರತಮ್ಯ: ಜ.17ರಂದು ಸಭೆ ಕರೆಯಲು ವಕೀಲರಿಗೆ ಸುಪ್ರೀಂ ಸೂಚನೆ

Update: 2020-01-13 18:18 IST

ಹೊಸದಿಲ್ಲಿ, ಜ.13:  ಕೇರಳದ ಶಬರಿಮಲೆ  ದೇವಸ್ಥಾನ ,ವಿವಿಧ ಧರ್ಮಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಾರತಮ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ  ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜನವರಿ 17 ರಂದು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ನಾಲ್ಕು ಹಿರಿಯ ವಕೀಲರನ್ನು ಸೋಮವಾರ ಕೇಳಿದೆ.

    ಇದೇ ವೇಳೆ  ಶಬರಿಮಲೆ  ಪ್ರಕರಣದಲ್ಲಿ ಪರಿಶೀಲನಾ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ಉನ್ನತ ನ್ಯಾಯಾಲಯವು ಆರಂಭದಲ್ಲಿ ಸ್ಪಷ್ಟಪಡಿಸಿದೆ.. "ನಾವು ಶಬರಿಮಲೆ  ಪ್ರಕರಣದ ಪರಿಶೀಲನಾ ಮನವಿಯನ್ನು ಆಲಿಸುತ್ತಿಲ್ಲ. ಈ ಹಿಂದೆ 5 ನ್ಯಾಯಾಧೀಶರ ಪೀಠವು ಉಲ್ಲೇಖಿಸಿರುವ ವಿಷಯಗಳನ್ನು ನಾವು ಪರಿಗಣಿಸುತ್ತಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ 9  ಮಂದಿ ನ್ಯಾಯಾಧೀಶರ ನ್ಯಾಯ  ಪೀಠ ಹೇಳಿದೆ.

     ಮುಸ್ಲಿಂ ಮಹಿಳೆಯರಿಗೆ  ಮಸೀದಿಗಳಿಗೆ ಪ್ರವೇಶ ನಿಷೇಧ, ದಾವೂದಿ  ಬೊಹ್ರಾ ಮುಸ್ಲಿಂ ಸಮುದಾಯದಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆ , ಪಾರ್ಸಿ ಅಲ್ಲದ ಪುರುಷರನ್ನು ಮದುವೆಯಾದ ಪಾರ್ಸಿ ಮಹಿಳೆಯರನ್ನು ನಿಷೇಧಿಸುವುದು, ಅವರನ್ನು ಪವಿತ್ರ ಅಗ್ನಿ ಸ್ಥಳದಿಂದ ದೂರವಿರಿಸುವುದರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು  ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

     ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎ ಎಂ ಸಿಂಗ್ವಿ ಸೇರಿದಂತೆ ನಾಲ್ಕು ಹಿರಿಯ ವಕೀಲರೊಂದಿಗೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅವರು ಸಮನ್ವಯ ಸಾಧಿಸಲಿದ್ದಾರೆ ಎಂದು ಅದು ಹೇಳಿದೆ.

    ಕಳೆದ ವರ್ಷ ನವೆಂಬರ್ 14 ರಂದು ಹಿಂದಿನ ನ್ಯಾಯಪೀಠವು ಉಲ್ಲೇಖಿಸಿದ ಹಲವಾರು ವಿಷಯಗಳ ಪರಿಶೀಲನೆ ಅಗತ್ಯವಿದೆಯೇ ಎಂದು ವಕೀಲರು ನಿರ್ಧರಿಸುತ್ತಾರೆ ಎಂದು ಅದು ಹೇಳಿದೆ. ಪ್ರಕರಣದಲ್ಲಿ ವಾದಗಳನ್ನು ಮುಂದುವರೆಸಲು ಪ್ರತಿ ವಕೀಲರಿಗೆ ಸಮಯವನ್ನು ಸಹ ಸಭೆ  ನಿಗದಿಪಡಿಬೇಕು ಎಂದು ಆದೇಶ ನೀಡಿದೆ. .

    ಯಾವ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ ಎಂಬ ಬಗ್ಗೆ ವಕೀಲರು ನಿರ್ಧರಿಸಬೇಕು ಮತ್ತು ಮೂರು ವಾರಗಳ ನಂತರ ಹೆಚ್ಚಿನ ವಿಚಾರಣೆಗೆ ಈ ವಿಷಯವನ್ನು ಸರಿಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ. "ವಿಷಯಗಳನ್ನು ನಿರ್ಧರಿಸಲು  ನಾವು ಮೂರು ವಾರಗಳನ್ನು ನೀಡುತ್ತೇವೆ ಮತ್ತು ಈ ವಿಷಯವನ್ನು ವಿಚಾರಣೆಗೆ ಇಡುತ್ತೇವೆ" ಎಂದು ಅದು ಹೇಳಿದೆ.

  ಈ ವಿಷಯವನ್ನು ವಿಸ್ಕೃತ ನ್ಯಾಯಪೀಠಕ್ಕೆ ಉಲ್ಲೇಖಿಸುವಾಗ, ಐದು ನ್ಯಾಯಾಧೀಶರ ನ್ಯಾಯಪೀಠವು ಧಾರ್ಮಿಕ ಆಚರಣೆಗಳ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಚರ್ಚೆಯನ್ನು ಶಬರಿಮಲೆ ಪ್ರವೇಶ ಪ್ರಕರಣಕ್ಕೆ  ಮಾತ್ರ ಸೀಮಿತಗೊಳಿಸಿಲ್ಲ.    ಮುಸ್ಲಿಂ ಮಹಿಳೆಯರಿಗೆ  ಮಸೀದಿ ಮತ್ತು ದರ್ಗಾಗಳಿಗೆ  ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ನಿರ್ಬಂಧ,  ಮತ್ತು ಪಾರ್ಸಿ ಅಲ್ಲದ ಪುರುಷರನ್ನು ಮದುವೆಯಾದ ' ಪಾರ್ಸಿ ಮಹಿಳೆಯರಿಗೆ ಪವಿತ್ರ ಅಗ್ನಿ  ಸ್ಥಳಗಳಿಗೆ ಪ್ರವೇಶ ನಿಷೇಧ  ವಿಚಾರದ ಬಗ್ಗೆಯೂ ವಿಚಾರಣೆ ನಡೆಸುವ ಬಗ್ಗೆ  ನ್ಯಾಯಪೀಠ  ಆಲೋಚಿಸುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

    ಸುಪ್ರೀಂ ಕೋರ್ಟ್ ನ 9 ಮಂದಿ ನ್ಯಾಯಮೂರ್ತಿಗಳ ವಿಸ್ಕೃತ ನ್ಯಾಯಪೀಠದಲ್ಲಿ ಮುಖ್ಯನ್ಯಾಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಮೋಹನ್ ಎಂ.ಶಾಂತನಗೌಡರ್, ಎಸ್.ಅಬ್ದುಲ್ ನಝೀರ್, ಆರ್.ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಇದ್ದಾರೆ.

   ಈ ಹಿಂದೆ ಶಬರಿಮಲೆಯ ಅರ್ಜಿಗಳ ಪರಿಶೀಲನೆ ನಡೆಸಿದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ನಾರಿಮನ್, ಎ.ಎಂ .ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಇಂಧು ಮಲ್ಹೋತ್ರಾ ವಿಸ್ಕೃತ ನ್ಯಾಯಪೀಠದಲ್ಲಿ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News