ಹಿಝ್ಬುಲ್ ಉಗ್ರರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್

Update: 2020-01-13 15:33 GMT

ಹೊಸದಿಲ್ಲಿ: ಉಗ್ರರೊಂದಿಗೆ ಕಾರೊಂದರಲ್ಲಿ ತೆರಳುತ್ತಿದ್ದಾಗ ಬಂಧನಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ತನ್ನ ಮನೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಬಂಧನದ ನಂತರ ದವೀಂದರ್ ಮನೆ ಮೇಲೆ ದಾಳಿ ನಡೆದಿದ್ದು, ಎಕೆ ರೈಫಲ್ ಮತ್ತು ಎರಡು ಪಿಸ್ತೂಲ್ ಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಹಿಝ್ಬುಲ್ ಉಗ್ರರ ಜೊತೆ ಕಾರಿನಲ್ಲಿ ಕಾಶ್ಮೀರದಿಂದ ಹೊರಕ್ಕೆ ತೆರಳುತ್ತಿದ್ದಾಗ ದವೀಂದರ್ ಸಿಂಗ್ ನನ್ನು ಬಂಧಿಸಲಾಗಿತ್ತು.

ಶೋಪಿಯಾನ್ ನಿಂದ ತನ್ನ ಮನೆಯ ತನಕ ಉಗ್ರರಿಗೆ ಬೆಂಗಾವಲಾಗಿದ್ದ ದವೀಂದರ್ ಸಿಂಗ್ ನಂತರ ತನ್ನ ಮನೆಯಲ್ಲಿ ರಾತ್ರಿ ಆಶ್ರಯ ನೀಡಿದ್ದ. ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ನವೀದ್ ಬಾಬು ಮತ್ತು ಇತರ ಇಬ್ಬರಾದ ಇರ್ಫಾನ್ ಮತ್ತು ರಫಿ ದವೀಂದರ್ ಮನೆಯಲ್ಲೇ ಇದ್ದರು. ಶನಿವಾರ ಬೆಳಗ್ಗೆ ಜಮ್ಮುವಿನಿಂದ ಹೊರಟ ಇವರು ದಿಲ್ಲಿಗೆ ತೆರಳಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಇಷ್ಟೇ ಅಲ್ಲದೆ ಮತ್ತೊಂದು ಆಘಾತಕಾರಿ ವಿಚಾರವೆಂದರೆ ಉಗ್ರರು ಆಶ್ರಯ ಪಡೆದಿದ್ದ ದವೀಂದರ್ ಮನೆಯು ಸೇನಾ ನೆಲೆಯ ಪಕ್ಕದಲ್ಲೇ ಇತ್ತು ಎಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News