56 ಅಧಿಕಾರಿಗಳನ್ನು ಕೈಬಿಟ್ಟ ವಾಲ್‌ಮಾರ್ಟ್ ಇಂಡಿಯಾ

Update: 2020-01-13 16:51 GMT

ಹೊಸದಿಲ್ಲಿ, ಜ.13: ದೇಶದಲ್ಲಿ 28 ಸಗಟು ಮಾರಾಟ ಅಂಗಡಿಗಳನ್ನು ಹೊಂದಿರುವ ವಾಲ್‌ಮಾರ್ಟ್ ಇಂಡಿಯಾ ಸಂಸ್ಥೆ ತನ್ನ ಸಾಂಸ್ಥಿಕ ಪುನರಚನೆ ಪ್ರಕ್ರಿಯೆಯ ಅಂಗವಾಗಿ 56 ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ವಿಧಾನಗಳನ್ನು ನಾವು ಹುಡುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸಾಂಸ್ಥಿಕ ಸ್ವರೂಪವನ್ನು ಮರುರೂಪಿಸುವ ಮೂಲಕ ಇನ್ನಷ್ಟು ಸಂಘಟಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಪುನರಾವಲೋಕನ ಪ್ರಕ್ರಿಯೆಯ ಅಂಗವಾಗಿ 8 ಹಿರಿಯ ವ್ಯವಸ್ಥಾಪಕ ಅಧಿಕಾರಿಗಳೂ ಸೇರಿದಂತೆ 56 ಅಧಿಕಾರಿಗಳಿಗೆ ಹೊಸ ನೌಕರಿ ಸೇವೆಗೆ ಸಹಾಯ ಹಾಗೂ ವರ್ಧಿತ ಬೇರ್ಪಡಿಕೆ ಲಾಭದ ಕೊಡುಗೆಯನ್ನು ನೀಡಲಾಗಿದೆ ಎಂದು ವಾಲ್‌ ಮಾರ್ಟ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಕೃಷ್ ಅಯ್ಯರ್ ಹೇಳಿದ್ದಾರೆ.

ಆದರೆ ಎಪ್ರಿಲ್‌ನಲ್ಲಿ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಮತ್ತೊಂದು ಪ್ರಕ್ರಿಯೆ ನಡೆಯಲಿದೆ ಎಂಬ ವರದಿಯನ್ನು ಅವರು ನಿರಾಕರಿಸಿದ್ದಾರೆ. ವಿಶ್ವದ ಅತ್ಯಂತ ಬೃಹತ್ ರಖಂ ಮಾರಾಟ ಸಂಸ್ಥೆಯಾಗಿರುವ ವಾಲ್‌ಮಾರ್ಟ್ 16 ಬಿಲಿಯ ಡಾಲರ್ ಪಾವತಿಸಿ ಫ್ಲಿಫ್‌ಕಾರ್ಟ್ ಸಂಸ್ಥೆಯನ್ನು ಖರೀದಿಸಿದ್ದು ಸುಮಾರು 5000 ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News