ರಾಜತಾಂತ್ರಿಕತೆಯಲ್ಲಿ ಆಸಕ್ತಿ ಇದೆ; ಅಮೆರಿಕ ಜೊತೆ ಮಾತುಕತೆಯಲ್ಲಿಲ್ಲ: ಇರಾನ್ ವಿದೇಶ ಸಚಿವ ಹೇಳಿಕೆ

Update: 2020-01-15 15:37 GMT

ಟೆಹರಾನ್, ಜ. 15: ನನ್ನ ದೇಶವು ರಾಜತಾಂತ್ರಿಕತೆಯಲ್ಲಿ ಆಸಕ್ತಿ ಹೊಂದಿದೆ, ಆದರೆ ಅಮೆರಿಕದ ಜೊತೆಗೆ ಮಾತುಕತೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಇರಾನ್ ವಿದೇಶ ಸಚಿವ ಜವಾದ್ ಜಾರಿಫ್ ಬುಧವಾರ ಹೇಳಿದ್ದಾರೆ.

 ಇತ್ತೀಚೆಗೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಯಾದ ಬಳಿಕ, ಇರಾನ್ ಮತ್ತು ಅಮೆರಿಕಗಳ ನಡುವೆ ಏರ್ಪಟ್ಟಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಮೇಜರ್ ಜನರಲ್ ಸುಲೈಮಾನಿಯನ್ನು ಹತ್ಯೆ ಮಾಡಿರುವುದು ಅಮೆರಿಕದ ವೌಢ್ಯ ಮತ್ತು ಅಹಂಕಾರವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 ‘‘ಇರಾನ್ ರಾಜತಾಂತ್ರಿಕತೆಯಲ್ಲಿ ಆಸಕ್ತಿ ಹೊಂದಿದೆ. ನಾವು ಅಮೆರಿಕದೊಂದಿಗೆ ಮಾತುಕತೆ ನಡೆಸುವಲ್ಲಿ ಆಸಕ್ತಿ ಹೊಂದಿಲ್ಲ. ಪರಮಾಣು ಒಪ್ಪಂದದಡಿ ಬರುವ ತನ್ನ ಬದ್ಧತೆಗಳನ್ನು ಅಮೆರಿಕ ನಿಭಾಯಿಸಿಲ್ಲ. ನಾವು ಅಮೆರಿಕದೊದಿಗೆ ಒಪ್ಪಂದವೊಂದನ್ನು ಹೊಂದಿದ್ದೆವು. ಆದರೆ ಅದನ್ನು ಅಮೆರಿಕ ಮುರಿಯಿತು. ನಾವು ಟ್ರಂಪ್ ಜೊತೆಗೆ ಒಪ್ಪಂದವನ್ನು ಹೊಂದಿದರೆ ಅದು ಎಷ್ಟು ಸಮಯ ನಡೆಯುತ್ತದೆ’’ ಎಂದು ಝಾರಿಫ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News