ಬೆಂಕಿ ಹೊತ್ತಿಕೊಂಡ ಯುಕ್ರೇನ್ ವಿಮಾನ ವಿಮಾನ ನಿಲ್ದಾಣದತ್ತ ತಿರುಗುತ್ತಿತ್ತು ‘ನ್ಯೂಯಾರ್ಕ್ ಟೈಮ್ಸ್’ ವರದಿ

Update: 2020-01-15 15:49 GMT

ವಾಶಿಂಗ್ಟನ್, ಜ. 15: ರಾತ್ರಿಯ ಆಕಾಶದಲ್ಲಿ ಯುಕ್ರೇನ್‌ನ ಪ್ರಯಾಣಿಕ ವಿಮಾನವನ್ನು ಎರಡು ಕ್ಷಿಪಣಿಗಳು ಚಿಂದಿ ಉಡಾಯಿಸುವ ದೃಶ್ಯಗಳನ್ನೊಳಗೊಂಡ ಹೊಸ ವೀಡಿಯೊವೊಂದು ಹೊರಬಿದ್ದಿದೆ.

ಎರಡು ಕ್ಷಿಪಣಿಗಳನ್ನು 30 ಸೆಕೆಂಡ್‌ಗಳ ಅಂತರದಲ್ಲಿ ಉಡಾಯಿಸಲಾಗಿತ್ತು. ವಿಮಾನವು ನೆಲಕ್ಕೆ ಧಾವಿಸಿ ಬರುತ್ತಿರುವಾಗ ಅದರ ಟ್ರಾನ್ಸ್‌ಪೋಂಡರ್ ಯಾಕೆ ಕೆಲಸ ಮಾಡಿಲ್ಲ ಎಂಬುದನ್ನು ಇದು ವಿವರಿಸುತ್ತದೆ. ಮೊದಲ ಕ್ಷಿಪಣಿಯು ವಿಮಾನದ ಟ್ರಾನ್ಸ್‌ಪೋಂಡರನ್ನು ಸ್ಥಗಿತಗೊಳಿಸಿತ್ತು ಹಾಗೂ ನಂತರ ವಿಮಾನಕ್ಕೆ ಎರಡನೇ ಕ್ಷಿಪಣಿ ಬಡಿಯಿತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಪತ್ರಿಕೆಯು ಮಂಗಳವಾರ ಪರಿಶೀಲಿಸಲಾದ ಸಿಸಿಟಿವಿ ಕ್ಯಾಮರ ವೀಡಿಯೊಗಳನ್ನು ಪ್ರಕಟಿಸಿದೆ.

ಕೀವ್‌ನತ್ತ ಹೋಗುತ್ತಿರುವ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹಾಗೂ ಟೆಹರಾನ್ ವಿಮಾನ ನಿಲ್ದಾಣಕ್ಕೆ ಹಿಂದಿರುಗಲು ಅದು ತಿರುಗುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ. ಈ ಮಸುಕು ವೀಡಿಯೊವನ್ನು ಇರಾನ್ ಸೇನಾ ನೆಲೆಯೊಂದರಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಮನೆಯೊಂದರ ಛಾವಣಿಯಿಂದ ಚಿತ್ರೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News