ಎನ್‌ಐಎ ಕಾಯ್ದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಛತ್ತೀಸ್‌ಗಢ ಸರಕಾರ

Update: 2020-01-15 18:10 GMT

ಹೊಸದಿಲ್ಲಿ, ಜ. 15: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆ-2008 ಅನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕಾಂಗ್ರೆಸ್ ನೇತೃತ್ವದ ಛತ್ತೀಸ್‌ಗಢ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಈ ಕಾಯ್ದೆಯನ್ನು ಪ್ರಶ್ನಿಸಿರುವ ಮೊದಲ ರಾಜ್ಯ ಸರಕಾರ ಛತ್ತೀಸ್‌ಗಢ.

 ಸಂವಿಧಾನದ ಕಲಂ 131ರ ಅಡಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇರಳ ಸರಕಾರ ಪ್ರಶ್ನಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರಸಕ್ತ ರೂಪದಲ್ಲಿರುವ ಎನ್‌ಐಎ ಕಾಯ್ದೆ ಪೊಲೀಸರ ಮೂಲಕ ತನಿಖೆ ನಡೆಸಲು ರಾಜ್ಯ ಸರಕಾರದ ಅಧಿಕಾರ ನೀಡುವುದಿಲ್ಲ. ಆದರೆ, ಕೇಂದ್ರ ಸರಕಾರಕ್ಕೆ ಮುಕ್ತ ಹಾಗೂ ನಿರಂಕುಶ ಅಧಿಕಾರ ನೀಡುತ್ತದೆ ಎಂದು ರಾಜ್ಯದ ಸ್ಥಾಯಿ ಸಮಿತಿ ಸಲ್ಲಿಸಿದ ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News