ಗಾಂಧೀಜಿ 'ಭಾರತ ರತ್ನ'ಕ್ಕಿಂತಲೂ ಮಿಗಿಲು ಎಂದ ಸುಪ್ರೀಂ ಕೋರ್ಟ್: ಕಾರಣವೇನು ಗೊತ್ತಾ?

Update: 2020-01-17 09:58 GMT

ಹೊಸದಿಲ್ಲಿ: "ಮಹಾತ್ಮ ಗಾಂಧಿ ಭಾರತ ರತ್ನ ಪುರಸ್ಕಾರಕ್ಕಿಂತಲೂ ಬಹಳ ಎತ್ತರದಲ್ಲಿರುವವರು. ಜನರು ಅವರನ್ನು ಅಪಾರ ಗೌರವದಿಂದ ಕಾಣುತ್ತಾರೆ. ಅವರಿಗೆ ಭಾರತ ರತ್ನದ ಅಗತ್ಯವೇನಿದೆ?''  ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಪ್ರಶ್ನಿಸಿದ್ದಾರೆ.

ಮಹಾತ್ಮ ಗಾಂಧಿಗೆ ಭಾರತ ರತ್ನ ನೀಡುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ  ಬೊಬ್ಬೆ ನೇತೃತ್ವದ ಪೀಠ ಸರಕಾರಕ್ಕೆ ಈ ನಿಟ್ಟಿನಲ್ಲಿ ಆದೇಶ ನೀಡಲು ನಿರಾಕರಿಸಿದೆ.

"ನಿಮ್ಮ  ಭಾವನೆ ನಮಗೆ ಅರ್ಥವಾಗುತ್ತದೆ. ಆದರೆ ಈ ಅಪೀಲನ್ನು ಸ್ವೀಕರಿಸಲು ಸಾಧ್ಯವಿಲ್ಲ, ನೀವು ಸರಕಾರಕ್ಕೆ ಮನವಿ ಸಲ್ಲಿಸಬಹುದು" ಎಂದು ಪಿಐಎಲ್ ದಾಖಲಿಸಿದವರಿಗೆ  ನ್ಯಾಯಾಲಯ ಹೇಳಿದೆ.

ಮಹಾತ್ಮ ಗಾಂಧಿ ಭಾರತ ರತ್ನಕ್ಕಿಂತಲೂ ಮಿಗಿಲು ಎಂದು ಸುಪ್ರೀಂ ಕೋರ್ಟ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅಪೀಲುದಾರ, ಅದಕ್ಕಿಂತಲೂ ಉನ್ನತ ಗೌರವವನ್ನು ಸೂಚಿಸುವಂತೆ ನ್ಯಾಯಾಲಯಕ್ಕೆ ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅಪೀಲುದಾರನಿಗೇ  ಸೂಚಿಸುವಂತೆ ಹೇಳಿದಾಗ ಇದು ಸರಕಾರದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News