ಉ. ಪ್ರದೇಶ ಸರಕಾರದ ಕಾರ್ಯಕ್ರಮದಲ್ಲಿ 'ಖವ್ವಾಲಿ'ಗೆ ಅವಕಾಶ ನಿರಾಕರಣೆ

Update: 2020-01-17 16:09 GMT

ಲಕ್ನೋ : ಉತ್ತರ ಪ್ರದೇಶ ಸರಕಾರ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮವೊಂದರಲ್ಲಿ ಖವ್ವಾಲಿ ಪ್ರದರ್ಶನ ನೀಡುತ್ತಿದ್ದ ಖ್ಯಾತ ನೃತ್ಯಪಟು ಮಂಜರಿ ಚತುರ್ವೇದಿ ಅವರ ಪ್ರದರ್ಶನವನ್ನು ಆಯೋಜಕರು ಅರ್ಧದಲ್ಲಿಯೇ ನಿಲ್ಲಿಸಿದ ಘಟನೆ ನಡೆದಿದೆ.

ಚತುರ್ವೇದಿ ಅವರ ಕಾರ್ಯಕ್ರಮಕ್ಕೆ 45 ನಿಮಿಷ ನಿಗದಿ ಪಡಿಸಲಾಗಿದ್ದರೂ ಸಂಗೀತ ಅರ್ಧದಲ್ಲಿಯೇ ನಿಂತಿದ್ದು, ಇದು ತಾಂತ್ರಿಕ ಕಾರಣದಿಂದ ಇರಬಹುದು ಎಂದು  ಆಕೆ ಅಂದುಕೊಂಡರೂ ನಂತರ  ಇದು ಉದ್ದೇಶಪೂರ್ವಕ ಕೃತ್ಯ ಎಂದು ಆಕೆಗೆ ತಿಳಿದು ಬಂದಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಮುಂದಿನ ಪ್ರದರ್ಶನದ ಕುರಿತು ಮಾಹಿತಿ ನೀಡಲಾಯಿತು.

ಈ ಕುರಿತು ಮಂಜರಿ ನಂತರ ಆಯೋಜಕರ ಬಳಿ ಪ್ರಶ್ನಿಸಿದಾಗ ಖವ್ವಾಲಿ ಪ್ರದರ್ಶಿಸುವ ಹಾಗಿಲ್ಲ ಎಂದಿದ್ದರೆಂದು ಆಕೆ ತಿಳಿಸಿದ್ದಾರೆ. ಇಂತಹ ಘಟನೆ ತಮ್ಮ ಹುಟ್ಟೂರಿನಲ್ಲಿ ನಡೆದಿದ್ದು ಇದೇ ಮೊದಲ ಬಾರಿ ಎಂದು ಆಕೆ ತನ್ನ ಅಸಮಾಧಾನ ತೋಡಿಕೊಂಡಿದ್ದಾರೆ.

ಖವ್ವಾಲಿ ಪ್ರದರ್ಶನ ನೀಡುವುದು ಆಯೋಜಕರಿಗೆ ಮೊದಲೇ ತಿಳಿದಿತ್ತು ಎಂದು ಆಕೆ ಹೇಳಿದ್ದಾರೆ. ಯಾವುದೇ ಧಾರ್ಮಿಕ ತಾರತಮ್ಯ ಇದಕ್ಕೆ ಕಾರಣವಲ್ಲ, ಬದಲಾಗಿ ಆಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಕಾರಣಗಳಿಗಾಗಿ ಹೀಗೆ ಮಾಡಲಾಗಿದೆ,  ಮುಖ್ಯಮಂತ್ರಿ ಆದಿತ್ಯನಾಥ್ ಆಗಮಿಸುವ ಮುನ್ನ ಎಲ್ಲರಿಗೂ ಅವಕಾಶ ನೀಡಬೇಕಿತ್ತು, ಬೃಜ್ ಕಾರ್ಯಕ್ರಮವೂ ನಡೆಯಲಿತ್ತು ಎಂಬ ಸಬೂಬನ್ನು ಆಯೋಜಕರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News