ಏಕದಿನ ಕ್ರಿಕೆಟ್ ಆಡುವ ಇಚ್ಛೆ ವ್ಯಕ್ತಪಡಿಸಿದ ಡಿವಿಲಿಯರ್ಸ್

Update: 2020-01-17 18:42 GMT

ಅಡಿಲೇಡ್, ಜ.17: ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮತ್ತೊಮ್ಮೆ ಪ್ರತಿನಿಧಿಸುವ ಆಸೆ ವ್ಯಕ್ತಪಡಿಸಿದ್ದ ಎಬಿಡಿ ವಿಲಿಯರ್ಸ್, ತನ್ನ ದೇಶದ ಪರ ಏಕದಿನ ಕ್ರಿಕೆಟ್ ಪಂದ್ಯವನ್ನೂ ಆಡುವ ಬಯಕೆಯನ್ನ್ನೂ ಹೊರಹಾಕಿದರು. ‘‘ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಆದರೆ,ನನಗೆ ಟೆಸ್ಟ್ ಕ್ರಿಕೆಟ್ ಆಡುವ ಇಚ್ಛೆಯಿಲ್ಲ’’ಎಂದು ಬಿಗ್‌ಬ್ಯಾಶ್ ಲೀಗ್‌ನಲ್ಲಿ ವೀಕ್ಷಕವಿವರಣೆಗಾರ ಆ್ಯಡಮ್ ಗಿಲ್‌ಕ್ರಿಸ್ ್ಟರೊಂದಿಗಿನ ಸಂಭಾಷಣೆಯ ವೇಳೆ ತಿಳಿಸಿದರು.

 ‘‘ನಾನು ಮತ್ತೊಮ್ಮೆ ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿರುವೆ. ನಾನು ಇನ್ನಷ್ಟು ರನ್ ಗಳಿಸಿದರೆ, ಫಿಟ್ ಆಗಿದ್ದರೆ ನನ್ನನ್ನು ಆಯ್ಕೆ ಮಾಡಬಹುದು. ಕೆಲವು ಟೆಸ್ಟ್ ಪಂದ್ಯಗಳನ್ನು ನೋಡಿದಾಗ ಆ ಪಂದ್ಯದಿಂದ ದೂರ ಉಳಿದಿರುವುದು ಒಳ್ಳೆದಾಯಿತು ಎನಿಸುತ್ತದೆ. ನನ್ನ ಬಾಳ್ವೆಯಲ್ಲಿ ಕೆಲವೊಂದು ಬದಲಾವಣೆಯಾಗಿದೆ...ನಾನು ವರ್ಷದ 11 ತಿಂಗಳು ಕಾಲ ಆಡಲು ಬಯಸುವುದಿಲ್ಲ. ಇದು ಅತಿಯಾಯಿತು’’ ಎಂದರು. 35ರ ಹರೆಯದ ಡಿವಿಲಿಯರ್ಸ್ 2018ರ ಮೇ 23ರಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. 2019ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ತಂಡಕ್ಕೆ ವಾಪಸಾಗಲು ಪ್ರಯತ್ನಿಸಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ. ಐಸಿಸಿ ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 18ರಿಂದ ಆರಂಭವಾಗಲಿದ್ದು, ನ.15ರಂದು ಕೊನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News