ಕಾರು ಅಪಘಾತ: ನಟಿ ಶಬನಾ ಆಝ್ಮಿಗೆ ಗಂಭೀರ ಗಾಯ

Update: 2020-01-18 13:34 GMT
Photo: twitter

ಹೊಸದಿಲ್ಲಿ: ಮಹಾರಾಷ್ಟ್ರದ ರಾಯ್ ಘಡ್ ನ ಮುಂಬೈ-ಪುಣೆ ಎಕ್ಸ್ ಪ್ರಸ್ ವೇಯಲ್ಲಿ ನಡೆದ ಅಪಘಾತವೊಂದರಲ್ಲಿ ನಟಿ ಶಬನಾ ಆಝ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಬೈಯಿಂದ 60 ಕಿ.ಮೀ. ದೂರದಲ್ಲಿರುವ ಖಾಲಾಪುರ್ ನಲ್ಲಿ ಈ ಅಪಘಾತ ಸಂಭವಿಸಿದೆ. ಶಬಾನಾ ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಒಂದಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಶಬಾನಾ ಅವರ ಮುಖಕ್ಕೆ ಗಾಯಗಳಾಗಿದ್ದು, ಕಣ್ಣು ಊದಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News