ಭಾರತದ ಗೆಲುವಿಗೆ 287 ರನ್‌ಗಳ ಸವಾಲು

Update: 2020-01-19 12:26 GMT

  ಬೆಂಗಳೂರು, ಜ.19: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಮಾಜಿ ನಾಯಕ ಸ್ಟೀವನ್ ಸ್ಮಿತ್ ಶತಕದ ನೆರವಿನಲ್ಲಿ ಆಸ್ಟ್ರೇಲಿಯ  ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 286 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡದ ಸ್ಮಿತ್ 131 ರನ್ (132ಎ, 14ಬೌ,1ಸಿ) ಮತ್ತು ಮಾರ್ನುಸ್ ಲ್ಯಾಬುಶೇನ್54 ರನ್(64ಎ, 5ಬೌ) ನೆರವಿನಲ್ಲಿ ಉತ್ತಮ ಮೊತ್ತ ದಾಖಲಿಸಿತು.

ಕಳೆದ ಪಂದ್ಯದಲ್ಲಿ ಸ್ಮಿತ್ 2 ರನ್‌ನಿಂದ ಶತಕ ವಂಚಿತಗೊಂಡಿದ್ದರು. ಈ ಪಂದ್ಯದಲ್ಲಿ 9ನೇ ಏಕದಿನ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಇವರನ್ನು ಹೊರತಪಡಿಸಿದರೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 35ರನ್, ನಾಯಕ ಆ್ಯರನ್ ಫಿಂಚ್ 19ರನ್, ಆ್ಯಸ್ಟನ್ ಅಗರ್ ಔಟಾಗದೆ 11 ರನ್ ಗಳಿಸಿದರು.

ಮುಹಮ್ಮದ್ ಶಮಿ 63ಕ್ಕೆ 4 ವಿಕೆಟ್, ರವೀಂದ್ರ ಜಡೇಜ 44ಕ್ಕೆ 2, ನವದೀಪ್ ಸೈನಿ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News