ಒಂದು ವರ್ಷ ಅವಧಿಯಲ್ಲಿ ದ್ವಿಗುಣಗೊಂಡ ಬಿಜೆಪಿ ಆದಾಯ

Update: 2020-01-20 06:37 GMT

ಹೊಸದಿಲ್ಲಿ :  ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಆಡಳಿತ ಬಿಜೆಪಿಯ ಆದಾಯ ಮಾರ್ಚ್ 2019ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ  ದ್ವಿಗುಣಗೊಂಡು 2,410 ಕೋಟಿ ರೂ. ತಲುಪಿದೆ. ಈ ಮೊತ್ತ ಐದು ವಿಪಕ್ಷಗಳು ಗಳಿಸಿದ ಒಟ್ಟು ಆದಾಯದ ಎರಡು ಪಟ್ಟು ಅಧಿಕವಾಗಿದೆ.

ಬಿಜೆಪಿಯ  ಮೂರನೇ ಎರಡು ಅಂಶದಷ್ಟು ಆದಾಯ, ಅಂದರೆ 1,450 ಕೋಟಿ ರೂ. ಪಾರದರ್ಶಕತೆಯ ಕೊರತೆಯಿರುವ ಇಲೆಕ್ಟೋರಲ್ ಬಾಂಡ್‍ಗಳ ಮೂಲಕ ಬಂದಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಚುನಾವಣಾ ಆಯೋಗದಿಂದ ಲಭ್ಯ ಅಂಕಿಅಂಶಗಳ ಆಧಾರದಲ್ಲಿ ವರದಿ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಇದೇ ಅವಧಿಯಲ್ಲಿ 918 ಕೋಟಿ ರೂ. ಆದಾಯ ಗಳಿಸಿದ್ದು ಇದರ ಪೈಕಿ ಶೇ 41.7ರಷ್ಟು ಆದಾಯ ಇಲೆಕ್ಟೋರಲ್ ಬಾಂಡ್ ಗಳ ಮೂಲಕ ಬಂದಿದೆ. ತೃಣಮೂಲ ಕಾಂಗ್ರೆಸ್ ಗಳಿಸಿದ 192 ಕೋಟಿ ರೂ. ನ ಅರ್ಧದಷ್ಟು ಇಲೆಕ್ಟೋರಲ್ ಬಾಂಡ್‍ಗಳ ಮೂಲಕ ಬಂದಿದೆ.

ಆಡಳಿತ ಬಿಜೆಪಿಯ ಆದಾಯ 2017-18ರಲ್ಲಿದ್ದ 1027 ಕೋಟಿ ರೂ. ನಿಂದ ಎರಡು ಪಟ್ಟು ಅಧಿಕವಾಗಿದ್ದರೂ ಕಾಂಗ್ರೆಸ್  ಆದಾಯ  ಹಿಂದಿನ ವರ್ಷಕ್ಕೆ ಹೋಲಿಸಿದಾಗ ನಾಲ್ಕೂವರೆ ಪಟ್ಟು ಅಧಿಕವಾಗಿದೆ. ಅತ್ತ ತೃಣಮೂಲ ಕಾಂಗ್ರೆಸ್ ಆದಾಯ 40 ಪಟ್ಟು ಅಧಿಕವಾಗಿದೆ. ಕಮ್ಯುನಿಸ್ಟ್ ಪಾರ್ಟ್ ಆಫ್ ಇಂಡಿಯಾ ಆದಾಯ ಆರ್ಥಿಕ ವರ್ಷ 2017-18ಗೆ ಹೋಲಿಸಿದಾಗ ಶೇ 3.7ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News