ಈ ದೇಶ ನಿರ್ಮಾಣವಾದದ್ದು ನಮ್ಮ ರಕ್ತದಿಂದ, ಕಾಗದಗಳಿಂದಲ್ಲ: ಫುಟ್ಬಾಲ್ ಪಂದ್ಯದ ವೇಳೆ NRC ವಿರುದ್ಧ ಪ್ರತಿಭಟನೆ

Update: 2020-01-20 14:02 GMT

ಕೊಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ವಿನೂತನವಾದ ಟಿಫೊಗಳನ್ನು (ಬೃಹತ್ ಗಾತ್ರದ ಚಿತ್ರ) ಅನಾವರಣಗೊಳಿಸುವ ಮೂಲಕ ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

"ರಕ್ತದ ಮೂಲಕ ವಶಪಡಿಸಿಕೊಂಡ ಭೂಮಿಯನ್ನು ಒಂದು ಕಾಗದದ ಚೂರು ಬದಲಿಸಲಾಗದು" ಎಂಬ ಒಕ್ಕಣೆ ಹೊಂದಿದ ಬೆಂಗಾಲಿ ಭಾಷೆಯಲ್ಲಿ ಬರೆದ ಬ್ಯಾನರ್ ಅನ್ನು 63,756 ಫುಟ್‍ ಬಾಲ್ ಪ್ರೇಮಿಗಳು ವೀಕ್ಷಿಸಿದರು.

"ಪೂರ್ವ ಬಂಗಾಳದ ಬಹುತೇಕ ಸಾಂಪ್ರದಾಯಿಕ ಅಭಿಮಾನಿ ಕುಟುಂಬಗಳು ಬಾಂಗ್ಲಾದೇಶದಿಂದ ವಲಸೆ ಬಂದವು. 1947ರ ವಿಭಜನೆ ವೇಳೆ ಇವರನ್ನು ಕಡ್ಡಾಯವಾಗಿ ಅಲ್ಲಿ ವಾಸಿಸುವಂತೆ ಮಾಡಲಾಗಿತ್ತು. ಎನ್‍ಆರ್ ಸಿ ಪತ್ರಗಳನ್ನು ತೋರಿಸುವಲ್ಲಿ ನಾವು ಮೊದಲಿಗರು" ಎಂದು ಪದಾಧಿಕಾರಿಗಳು ಅಣಕವಾಡಿದರು.

ಇದು ನಮ್ಮ ಬಲದ ಸಂಕೇತ ಮತ್ತು ನಮ್ಮ ಉತ್ತರದ ಬ್ಯಾನರ್ ಎಂದು ಬತೂಲ್ ದ ಗ್ರೇಟ್ ಹೇಳಿದರು. ಎನ್‍ಆರ್‍ಸಿ ಜಾರಿ ವಿರುದ್ಧ ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News