ಸಂಖ್ಯಾಬಲ ಇದೆ ಎಂದು ಭೀತಿ ಹುಟ್ಟಿಸುವ ರಾಜಕಾರಣ ಬೇಡ: ಬಿಜೆಪಿಗೆ ನೇತಾಜಿ ಮೊಮ್ಮಗ ಚಂದ್ರಕುಮಾರ್ ಬೋಸ್

Update: 2020-01-20 14:08 GMT

ಹೊಸದಿಲ್ಲಿ: ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನುಗಳು ನಾಗರಿಕರಿಗೆ ಒತ್ತಡವಾಗಬಾರದು. ಕೇವಲ ಸಂಖ್ಯಾಬಲ ಅಥವಾ ಬಹುಮತ ಇದೆ ಎಂಬ ಕಾರಣಕ್ಕೆ ಭೀತಿ ಹುಟ್ಟಿಸುವ ರಾಜಕಾರಣ ಬೇಡ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಹಾಗೂ ನೇತಾಜಿ ಸುಭಾಸ್‍ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ತಿಂಗಳು ಸಂಸತ್ತಿನಲ್ಲಿ ಆಂಗೀಕಾರವಾದ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಉಲ್ಲೇಖಿಸಿದ ಅವರು, "ನಮ್ಮ ಕೆಲಸವೆಂದರೆ ಜನರಿಗೆ ನಾವು ಸರಿ ತಪ್ಪುಗಳನ್ನು ವಿವರಿಸುವುದು. ಆದರೆ ನಿಂದಿಸುವುದಲ್ಲ; ಕೇವಲ ಸಂಖ್ಯಾಬಲ ಇದೆ ಎಂಬ ಮಾತ್ರಕ್ಕೆ ನಾವು ಭಯ ಹುಟ್ಟಿಸುವ ರಾಜಕೀಯ ಮಾಡಬಾರದು. ಸಿಎಎ ಪ್ರಯೋಜನಗಳನ್ನು ವಿವರಿಸೋಣ" ಎಂದು ಹೇಳಿದ್ದಾರೆ.

"ಮಸೂದೆ ಕಾಯ್ದೆಯಾದ ಬಳಿಕ ಎಲ್ಲ ರಾಜ್ಯ ಸರ್ಕಾರಗಳು ಅದಕ್ಕೆ ಬದ್ಧವಾಗಬೇಕಾಗುತ್ತದೆ. ಅದು ಕಾನೂನಾತ್ಮಕ ಅಂಶ. ಆದರೆ ಪ್ರಜಾಸತ್ತಾತ್ಮಕ ದೇಶದಲ್ಲಿ ಯಾವುದೇ ಕಾನೂನುಗಳನ್ನು ನಾಗರಿಕರ ಮೇಲೆ ಹೇರಬಾರದು" ಎಂದು ಅಭಿಪ್ರಾಯಪಟ್ಟರು.

ವಿರೋಧ ಪಕ್ಷಗಳ ಪ್ರಚಾರವನ್ನು ತಡೆಯಲು ಮಸೂದೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಅವರು ಸಲಹೆ ಮಾಡಿದರು. ಸ್ವಲ್ಪಮಟ್ಟಿಗೆ ಪರಿಷ್ಕರಣೆಯನ್ನು ಪಕ್ಷದ ಮುಖಂಡರಿಗೆ ಸಲಹೆ ಮಾಡಿದ್ದೇನೆ. ಇದು ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಎನ್ನುವುದನ್ನು ನಾವು ತಿಳಿಹೇಳಬೇಕಾಗಿದೆ. ಯಾವುದೇ ಧರ್ಮವನ್ನು ಉಲ್ಲೇಖಿಸಬಾರದು. ನಮ್ಮ ದೃಷ್ಟಿಕೋನ ಭಿನ್ನವಾಗಿರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News