ವಧುವಿನ ತಾಯಿಯೊಂದಿಗೆ ಪರಾರಿಯಾದ ವರನ ತಂದೆ!

Update: 2020-01-21 09:05 GMT

ಅಹ್ಮದಾಬಾದ್: ಗುಜರಾತ್‍ ನ ಸೂರತ್‍ ನಲ್ಲಿ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿಯ ಮದುವೆ ನಿಂತು ಹೋಗಿದೆ. ಕಾರಣ- ವಧುವಿನ ಅಮ್ಮ ಹಾಗೂ ವರನ ಅಪ್ಪ ಪರಾರಿಯಾಗಿದ್ದಾರೆ.

ಕಳೆದ ಹತ್ತು ದಿನಗಳಿಂದ ಇಬ್ಬರೂ ಕಾಣಿಸದೇ ಇರುವುದರಿಂದ 48 ವರ್ಷದ ವ್ಯಕ್ತಿ ಹಾಗೂ 46 ವರ್ಷದ ಮಹಿಳೆಯ  ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದಾರೆ. ಈ ಮಧ್ಯವಯಸ್ಕ ಜೋಡಿಗೆ ಹಿಂದಿನಿಂದಲೇ ಪರಿಚಯವಿತ್ತು ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.

ತಮ್ಮ ಮಕ್ಕಳ  ಮದುವೆಗೆ ಇನ್ನೇನು ಒಂದು ತಿಂಗಳಿದೆಯೆನ್ನುವಾಗ ಕಟರ್ಗಮ್ ಇಲ್ಲಿನ ಜವುಳಿ ಉದ್ಯಮಿ ಹಾಗೂ ನವ್ಸರಿ ಗ್ರಾಮದ ಗೃಹಿಣಿ ಜನವರಿ 10ರಿಂದ ನಾಪತ್ತೆಯಾಗಿದ್ದಾರೆ. ಇಬ್ಬರೂ ಈ ಹಿಂದೆ ನೆರೆಹೊರೆಯವರಾಗಿದ್ದರೆನ್ನಲಾಗಿದ್ದು ಹಿಂದೊಮ್ಮೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದೂ ಹೇಳಲಾಗಿದೆ. ಹಿಂದೆ ಕೂಡ ಅವರು ಒಮ್ಮೆ ಪರಾರಿಯಾಗಲು  ಯತ್ನಿಸಿದ್ದರೆನ್ನಲಾಗಿದೆ. ನಂತರ ಮಹಿಳೆಗೆ ಶ್ರೀಮಂತ ವಜ್ರೋದ್ಯಮಿ ಜತೆ ವಿವಾಹವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News