ಎನ್‌ಪಿಆರ್‌ಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ : ಕೇಂದ್ರ ಸಹಾಯಕ ಸಚಿವ ಕಿಶನ್ ರೆಡ್ಡಿ

Update: 2020-01-21 17:03 GMT
ಫೋಟೊ ಕೃಪೆ: twitter.com/kishanreddybjp

ಹೊಸದಿಲ್ಲಿ, ಜ. 21: ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೆ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳ ತೀವ್ರ ವಿರೋಧದ ನಡುವೆ ಮಂಗಳವಾರ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, ಎನ್‌ಪಿಆರ್‌ಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ. ಸ್ಪಯಂಪ್ರೇರಿತವಾಗಿ ಮಾತ್ರ ನೀಡಿ ಎಂದಿದೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿಯನ್ನು 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮೊದಲ ಬಾರಿ ಆರಂಭಿಸಿತ್ತು. ಇದು ಸಂವಿಧಾನಿಕ ಬಾಧ್ಯತೆ ಆಗಿತ್ತು ಎಂದು ಕೇಂದ್ರದ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ. ಸ್ವಯಂ ಪ್ರೇರಿತವಾಗಿ ಮಾತ್ರ ಎನ್‌ಪಿಆರ್‌ಗೆ ಮಾಹಿತಿ ಬಹಿರಂಗಪಡಿಸಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಎನ್‌ಪಿಆರ್ ಸಾಂವಿಧಾನಿಕ ಭಾದ್ಯತೆ ಆದ ಬಳಿಕ ರಾಜ್ಯ ಸರಕಾರಗಳು ಇದನ್ನು ವಿರೋಧಿಸಬಾರದು. ಎನ್‌ಪಿಆರ್‌ನ ವಿವಿಧ ಅಂಶಗಳ ಕುರಿತು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News