ಸೌದಿ ಅರೇಬಿಯದಲ್ಲಿರುವ ಭಾರತೀಯ ನರ್ಸ್‌ಗೆ ಕೊರೋನವೈರಸ್ ಸೋಂಕು

Update: 2020-01-23 15:58 GMT
ಸಾಂದರ್ಭಿಕ ಚಿತ್ರ

ರಿಯಾದ್ (ಸೌದಿ ಅರೇಬಿಯ), ಜ. 23: ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಮಾರಕ ಕೊರೋನವೈರಸ್ ಸೋಂಕಿಗೆ ಸೌದಿ ಅರೇಬಿಯದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್ ಒಬ್ಬರು ಗುರಿಯಾಗಿದ್ದಾರೆ. ಅವರು ಈ ರೋಗದ ಸೋಂಕಿಗೆ ಗುರಿಯಾದ ಮೊದಲ ಭಾರತೀಯರಾಗಿದ್ದಾರೆ.

ಈಗಾಗಲೇ ಈ ಹೊಸ ಮಾದರಿಯ ಕಾಯಿಲೆಗೆ 17 ಮಂದಿ ಬಲಿಯಾಗಿದ್ದಾರೆ.

 ಸುಮಾರು 100 ಭಾರತೀಯ ನರ್ಸ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಹಾಗೂ ಆ ಪೈಕಿ ಒಬ್ಬ ನರ್ಸ್ ಮಾತ್ರ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಹೇಳಿದರು. ತಪಾಸಣೆಗೆ ಗುರಿಯಾದ ನರ್ಸ್‌ಗಳಲ್ಲಿ ಹೆಚ್ಚಿನವರು ಕೇರಳದವರು.

ಕೊರೋನವೈರಸ್‌ನ ಬೆದರಿಕೆ ಹಿನ್ನೆಲೆಯಲ್ಲಿ, ಭಾರತೀಯ ನರ್ಸ್‌ಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ಸಚಿವರು ನುಡಿದರು.

‘‘ಸೋಂಕಿಗೆ ಒಳಗಾಗಿರುವ ನರ್ಸ್ ಅಸೀರ್ ನ್ಯಾಶನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಅವರು ಉತ್ತಮವಾಗಿ ಚೇತರಿಸುತ್ತಿದ್ದಾರೆ’’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಪಿಣರಾಯಿ ವಿಜಯನ್‌ರಿಂದ ವಿದೇಶ ಸಚಿವಗೆ ಪತ್ರ:

ಕೊರೋನವೈರಸ್ ಸೋಂಕಿಗೆ ಒಳಗಾದ ನರ್ಸ್‌ಗೆ ಸೂಕ್ತ ಚಿಕಿತ್ಸೆ ಮತ್ತು ರಕ್ಷಣೆ ಒದಗಿಸುವಂತೆ ಸೌದಿ ಅರೇಬಿಯಕ್ಕೆ ಮನವಿ ಮಾಡುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶ ಸಚಿವ ಎಸ್. ಜೈಶಂಕರ್‌ಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News