ನೇಮಕಾತಿ ವಂಚನೆಯ ಕುರಿತು ವೈದ್ಯರಿಗೆ ಆಯುಷ್ ಸಚಿವಾಲಯದ ಎಚ್ಚರಿಕೆ

Update: 2020-01-25 15:51 GMT

ಹೊಸದಿಲ್ಲಿ,ಜ.25: ಆಯುಷ್ ವೈದ್ಯರ ನೇಮಕಾತಿಗಾಗಿ ನಕಲಿ ನೋಟಿಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸರಕಾರಿ ನೇಮಕಾತಿಗಳ ಅಧಿಸೂಚನೆಗಳನ್ನೇ ಹೋಲುವ ಈ ನೋಟಿಸ್‌ಗಳನ್ನು ವಂಚಕ ಏಜೆನ್ಸಿಗಳು ಬಿಡುಗಡೆಗೊಳಿಸುತ್ತಿದ್ದು,ಸರಕಾರಿ ಸಂಸ್ಥೆಗಳನ್ನೇ ಹೋಲುವ ದಾರಿ ತಪ್ಪಿಸುವಂತಹ ಹೆಸರುಗಳನ್ನು ಬಳಸಿಕೊಳ್ಳುತ್ತಿವೆ. ಈ ಏಜೆನ್ಸಿಗಳು ಆನಲೈನ್ ಪೇಮೆಂಟ್ ಮೂಲಕ ಅಭ್ಯರ್ಥಿಗಳಿಂದ ಶುಲ್ಕಗಳನ್ನೂ ಸಂಗ್ರಹಿಸುತ್ತಿದ್ದು, ಉದ್ಯೋಗಾಕಾಂಕ್ಷಿಗಳ ದಾರಿ ತಪ್ಪಿಸಲು ಭಾರತ ಸರಕಾರಕ್ಕೆ ಸೇರಿದ ಲಾಂಛನ/ಚಿತ್ರಗಳನ್ನು ದುರುಪಯೋಗಿಸಿಕೊಳ್ಳುವ ಜೊತೆಗೆ ಆಯುಷ್ ಸಚಿವಾಲಯದ ವಿಳಾಸವನ್ನೇ ಹೋಲುವ ನಕಲಿ ವಿಳಾಸವನ್ನು ಬಳಸುತ್ತಿವೆ.

ಈ ನೇಮಕಾತಿ ವಂಚನೆ ಜಾಲದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಲು ಸಲಹಾ ಪತ್ರವೊಂದನ್ನು ಹೊರಡಿಸಿರುವ ಆಯುಷ್ ಸಚಿವಾಲಯವು,ಇಂತಹ ನಕಲಿ ನೇಮಕಾತಿ ನೋಟಿಸ್‌ಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

ಭಾರತ ಸರಕಾರವು ನಿಗದಿಗೊಳಿಸಿರುವ ನೇಮಕಾತಿಯ ವಿಧ್ಯುಕ್ತ ವಿಧಿವಿಧಾನಗಳನ್ನು ಅನುಸರಿಸುವಂತೆ ಅದು ಆಯುಷ್ ವೈದ್ಯರನ್ನು ಕೋರಿದೆ.

ಸರಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳು ಆಯಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಬಿಡುಗಡೆಗೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News