370ನೆ ವಿಧಿ ರದ್ದು: ಗೃಹಬಂಧನದಲ್ಲಿರುವ ಒಮರ್ ಅಬ್ದುಲ್ಲಾ ಹೇಗಿದ್ದಾರೆ ಗೊತ್ತಾ?: ಫೋಟೊ ವೈರಲ್

Update: 2020-01-25 16:22 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಗೃಹಬಂಧನದಲ್ಲಿರುವ ಒಮರ್ ಅಬ್ದುಲ್ಲಾ ಅವರ ಫೋಟೊವೊಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ನನಗೆ ಒಮರ್ ರ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. ಬೇಸರವಾಗುತ್ತಿದೆ. ದುರದೃಷ್ಟವಶಾತ್ ಇದು ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುತ್ತಿದೆ" ಎಂದಿದ್ದಾರೆ.

ಕಳೆದ ವರ್ಷ ಆಗಸ್ಟ್ ನಲ್ಲಿ 370ನೆ ವಿಧಿ ರದ್ದುಗೊಂಡ ನಂತರ ಗೃಹಬಂಧನದಲ್ಲಿರುವ ಕಾಶ್ಮೀರದ ರಾಜಕೀಯ ನಾಯಕರಲ್ಲಿ ಒಮರ್ ಅಬ್ದುಲ್ಲಾ ಕೂಡ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News