ಸಲ್ಮಾನ್‌ಖಾನ್ ಚಿತ್ರಕ್ಕೆ ಭಾರಜಾತ್ಯ ಪುತ್ರನ ನಿರ್ದೇಶನ

Update: 2020-01-26 12:14 GMT

2

  020ರಲ್ಲಿಯೂ ಬಾಲಿವುಡ್ ಸುಲ್ತಾನ್ ಸಲ್ಮಾನ್‌ಖಾನ್ ಕೈ ತುಂಬಾ ಚಿತ್ರಗಳಿವೆ. ರಾಧೆ, ಕಿಕ್2, ಕಭಿಈದ್‌ಕಭಿ ದಿವಾಲಿ, ವಾಂಟೆಡ್ 2 ಹೀಗೆ ಹಲವಾರು ಚಿತ್ರಗಳ ಶೂಟಿಂಗ್‌ನಲ್ಲಿ ಆತ ಬ್ಯುಸಿಯಾಗಲಿದ್ದಾರೆ. ಈ ಮಧ್ಯೆ ಸಲ್ಮಾನ್‌ಖಾನ್ ಅಭಿನಯದ ನೂತನ ಚಿತ್ರಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದೆ. ಮೈನೆ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್‌ನಂತಹ ಸೂಪರ್‌ಹಿಟ್ ಚಿತ್ರಗಳ ನಿರ್ದೇಶಕ ಸೂರಜ್ ಭಾರಜಾತ್ಯ ನಿರ್ಮಿಸಲಿರುವ ಚಿತ್ರದಲ್ಲಿಯೂ ಆತ ನಟಿಸಲಿದ್ದಾರೆ.

ಇನ್ನೂ ಹೆಸರಿಡದ ಈ ಬಿಗ್‌ಬಜೆಟ್ ಚಿತ್ರದ ಸ್ಕ್ರಿಪ್ಟ್ ತಯಾರಿಸುವ ಕೆಲಸದಲ್ಲಿ ಭಾರಜಾತ್ಯ ನಿರತರಾಗಿದ್ದಾರೆ. ಅಂದ ಹಾಗೆ ಈ ಚಿತ್ರಕಥೆಯನ್ನು ಬರೆಯಲು ಅವರು ಬರೋಬ್ಬರಿ ಎರಡು ವರ್ಷಗಳನ್ನು ತೆಗೆದುಕೊಂಡಿದ್ದರಂತೆ. ಚಿತ್ರದ ಕಥೆಯನ್ನು ಸಲ್ಮಾನ್‌ಖಾನ್‌ಗೆ ವಿವರಿಸಿದಾಗ ಅವರದನ್ನು ತುಂಬಾನೆ ಮೆಚ್ಚಿಕೊಂಡರಂತೆ.

 ಭಾರಜಾತ್ಯ ಅವರ ಹಿಂದಿನ ಚಿತ್ರಗಳ ಹಾಗೆ ಈ ಸಿನೆಮಾ ಕೂಡಾ ಕೌಟುಂಬಿಕ, ಡ್ರಾಮಾ ಹಾಗೂ ಭಾವನಾತ್ಮಕ ಕಥಾವಸ್ತುವನ್ನು ಹೊಂದಿದೆ. ಆದರೆ ಈ ಚಿತ್ರವನ್ನು ಸೂರಜ್ ಭಾರಜಾತ್ಯ ನಿರ್ದೇಶಿಸುವುದಿಲ್ಲವಂತೆ. ಬದಲಿಗೆ ಅವರ ಪುತ್ರ ಅವನಿಶ್, ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರಂತೆ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಆದಾಗ್ಯೂ ಚಿತ್ರರಂಗ ಅವನಿಶ್ ಹೊಸದೇನಲ್ಲವಂತೆ. ತನ್ನ ತಂದೆ ನಿರ್ದೇಶಿದ ಪ್ರೇಮ್ ರತನ್ ಧನ್ ಪಾಯೊ ಚಿತ್ರದಲ್ಲಿ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

 ಸಲ್ಮಾನ್‌ಖಾನ್ ಹಾಗೂ ಸೂರಜ್ ಭಾರಜಾತ್ಯ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಜೊತೆಯಾಗಿ ಸಿನೆಮಾ ಪಯಣವನ್ನು ಆರಂಭಿಸಿದ್ದರು. 2015ರಲ್ಲಿ ಬಿಡುಗಡೆಯಾದ ಪ್ರೇಮ್ ರತನ್ ಧನ್ ಪಾಯೊ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ ಕೊನೆಯ ಚಿತ್ರವಾಗಿತ್ತು. ಒಟ್ಟಿನಲ್ಲಿ ಸೂರಜ್ ಪುತ್ರ ಅವನಿಶ್ ಕೂಡಾ ತನ್ನ ತಂದೆಯ ಭವ್ಯ ಬಾಲಿವುಡ್ ಪರಂಪರೆಯನ್ನು ಮುಂದುವರಿಸುವಲ್ಲಿ ಯಶಸ್ವಿಯಾಗುವರೇ ಎಂಬುದನ್ನು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News