ಬೊಡೋ ಉಗ್ರ ಸಂಘಟನೆ ಎನ್‍ ಡಿಎಫ್‍ ಬಿ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಗೃಹ ಸಚಿವಾಲಯ

Update: 2020-01-27 11:09 GMT

ಹೊಸದಿಲ್ಲಿ: ಗೃಹ ವ್ಯವಹಾರಗಳ ಸಚಿವಾಲಯವು ಬೋಡೋ ಉಗ್ರ ಸಂಘಟನೆ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಜತೆಗೆ ಸೋಮವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಶಾಂತಿ ಒಪ್ಪಂದವನ್ನು ವಿರೋಧಿಸಿ ಹಲವಾರು ಬೋಡೋ-ಯೇತರ ಸಂಘಟನೆಗಳು ಅಸ್ಸಾಂನಲ್ಲಿ 12 ಗಂಟೆಗಳ ಬಂದ್‍ಗೆ ಕರೆ ನೀಡಿದ್ದವು.

ಬೋಡೋ ಸಮಾಜಕ್ಕೆ ಸಂಬಂಧಿಸಿದ್ದ ಎಲ್ಲರೂ ಈ ಒಪ್ಪಂದಕ್ಕೆ ಸಹಿ ಹಾಕಿ ಅಸ್ಸಾಂನ ಪ್ರಾದೇಶಿಕ ಸಮಗ್ರತೆಯನ್ನು ಪುನರುಚ್ಛರಿಸಿವೆ ಎಂದು ಅಸ್ಸಾಂ ಸಚಿವ ಹೇಮಂತ ಬಿಸ್ವ ಶರ್ಮ ಹೇಳಿದ್ದಾರೆ.

"ಇಂದು ಕೇಂದ್ರ ಸರಕಾರ, ಅಸ್ಸಾಂ ಸರಕಾರ ಹಾಗೂ ಬೋಡೋ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ ಅಸ್ಸಾಂ ಹಾಗೂ ಬೋಡೋ ಜನರ ಭವಿಷ್ಯವನ್ನು ಬಂಗಾರವಾಗಿಸುವುದು'' ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

"ಜನವರಿ 30ರಂದು 1550 ಕೇಡರ್‍ಗಳು ತಮ್ಮ 130 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲಿವೆ. ಎಲ್ಲಾ ಭರವಸೆಗಳನ್ನು ಒಂದು ಕಾಲಮಿತಿಯೊಳಗೆ ಈಡೇರಿಸಲಾಗುವುದು ಎಂದು ನಾನು  ಆಶ್ವಾಸನೆ ನೀಡುತ್ತೇನೆ'' ಎಂದು ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News