ಸಾಮಾಜಿಕ ಹೋರಾಟಗಾರ ಶರ್ಜೀಲ್ ಇಮಾಮ್ ಮನೆ ಮೇಲೆ ಕೇಂದ್ರ ಗುಪ್ತಚರ ಸಂಸ್ಥೆ ದಾಳಿ

Update: 2020-01-27 16:39 GMT

ಪಾಟ್ನಾ, ಜ. 27: ಸಾಮಾಜಿಕ ಹೋರಾಟಗಾರ ಶರ್ಜೀಲ್ ಇಮಾಮ್‌ರ ಬಿಹಾರದ ಜೆಹೆನಾಬಾದ್ ಜಿಲ್ಲೆಯ ಕಾಕೋ ಗ್ರಾಮದಲ್ಲಿರುವ ಪೂರ್ವಜರ ಮನೆ ಮೇಲೆ ಸ್ಥಳೀಯ ಪೊಲೀಸರೊಂದಿಗೆ ಕೇಂದ್ರ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳ ತಂಡ ಸಾಮೂಹಿಕ ಶೋಧ ಹಾಗೂ ದಾಳಿಯನ್ನು ರವಿವಾರ ಸಂಜೆ ವರೆಗೆ ನಡೆಸಿತು.

ಆದರೆ, ಶರ್ಜೀಲ್ ಇಮಾಮ್‌ರು ಪೂರ್ವಜರ ಮನೆಯಲ್ಲಿ ಇರಲಿಲ್ಲ. ಆದರೆ, ಪೊಲೀಸರು ಅವರ ಕೆಲವು ಸಂಬಂಧಿಕರನ್ನು ವಿಚಾರಣೆ ನಡೆಸಿದರು ಹಾಗೂ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಭಾರತದಿಂದ ಈಶಾನ್ಯ ವಲಯವನ್ನು ವಿಭಜಿಸುವಂತೆ ಕರೆ ನೀಡಿದ ಭಾಷಣದ ವೀಡಿಯೊ ವೈರಲ್ ಆದ ಬಳಿಕ ಶರ್ಜೀಲ್ ಇಮಾಮ್ ವಿವಾದದ ಕೇಂದ್ರ ಬಿಂದುವಾಗಿದ್ದರು. ವೀಡಿಯೊ ವೈರಲ್ ಆದ ಬಳಿಕ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಭಾಷಣ ಮಾಡಿ ಜನರನ್ನು ಉತ್ತೇಜಿಸಿದ ಆರೋಪದಲ್ಲಿ ದಿಲ್ಲಿ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News