ಚೀನಾದ ಕಾರುಗಳಿಗೆ ಗಡಿಯನ್ನು ಮುಚ್ಚಿದ ಮಂಗೋಲಿಯಾ

Update: 2020-01-27 17:01 GMT

ಉಲನ್‌ಬಾಟೊರ್, ಜ.27: 80ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೋನ ವೈರಸ್ ಪಿಡುಗಿನಿಂದ ಹೈರಾಣಾಗಿರುವ ಚೀನಾ ದೇಶದ ಕಾರುಗಳಿಗೆ ಮಂಗೋಲಿಯಾ ತನ್ನ ಗಡಿಗಳನ್ನು ಮುಚ್ಚುಗಡೆಗೊಳಿಸಿದೆ. ಮಾರಣಾಂತಿಕ ವೈರಸ್ ತನ್ನ ನೆಲವನ್ನು ತಲುಪುವುದನ್ನು ತಡೆಗಟ್ಟುವ ಪ್ರಯತ್ನವಾಗಿ ಅದು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ ಹಾಗೂ ಶಿಕ್ಷಣಸಂಸ್ಥೆಗಳಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಿದೆ.

ಚೀನಾದ ನೆರೆಯ ರಾಷ್ಟ್ರವಾಗಿದ್ದರೂ ಮಂಗೋಲಿಯಾದಲ್ಲಿ ಈ ತನಕ ಕೊರೋನ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಯುರೋಪ್ ಖಂಡ, ಅಮೆರಿಕ ಹಾಗೂ ಏಶ್ಯ ಸೇರಿದಂತೆ ಹೆಚ್ಚು ಕಮ್ಮಿ 12 ರಾಷ್ಟಗಳಲ್ಲಿ ಕೊರೋನ ವೈರಸ್ ಬಾಧಿತ ಪ್ರಕರಣಗಳು ಪತ್ತೆಯಾಗಿವೆ. ಚೀನಾದ ನೆರೆಯ ರಾಷ್ಟ್ರವಾದ ಮಂಗೊಲಿಯಾದಲ್ಲಿ ನ್ಯೂಮೊನಿಯಾ ಮಾದರಿಯ ಈ ವೈರಸ್‌ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಮಂಗೋಲಿಯಾದ ಗಡಿಭಾಗದಲ್ಲಿರುವ ಚೀನಾದ ಪ್ರಾಂತವೊಂದರಲ್ಲಿ ಕೊರೋನ ವೈರಸ್‌ನ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಉಪ ಪ್ರಧಾನಿ ಎಂಕ್ತುವ್‌ಶಿನ್ ಉಲ್ಝಿಸೈಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News