ವೂಹಾನ್ ಕಾಡುಪ್ರಾಣಿಗಳ ಮಾರಾಟ ಮಳಿಗೆ ಕೊರೋನ ವೈರಸ್‌ನ ಉಗಮಸ್ಥಾನ?

Update: 2020-01-27 17:08 GMT

ಬೀಜಿಂಗ್,ಜ.26: ಚೀನಾದಲ್ಲಿ ಹಾಹಾಕಾರ ಸೃಷ್ಟಿಸಿರುವ ಮಾರಣಾಂತಿಕ ಕೊರೋನ ವೈರಸ್ (2019) ಅನ್ನು ವುಹಾನ್‌ನಮತ್ಸ ಮಾರುಕಟ್ಟೆಯಲ್ಲಿರುವ ಕಾಡುಪ್ರಾಣಿಗಳ ಮಾರಾಟ ಮಳಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

ವುಹಾನ್‌ನ ಹುವಾನಾನ್ ಸಮುದ್ರ ಆಹಾರ ಸಗಟು ಮಾರುಕಟ್ಟೆಯ ಪರಿಸರದಿಂದ ಸಂಗ್ರಹಿಸಲಾದ 585 ಸ್ಯಾಂಪಲ್‌ಗಳಲ್ಲಿ ನೊವೆಲ್ ಕೊರೋನ ವೈರಸ್‌ನಲ್ಲಿರುವ ನ್ಯೂಕ್ಲೆರಿಕ್ ಆ್ಯಸಿಡ್ ಒಳಗೊಂಡಿರುವುದು ಪತ್ತೆಯಾಗಿದೆಯೆಂದು ವೈರಾಣು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತ ರಾಷ್ಟ್ರೀಯ ಸಂಸ್ಥೆಯು ತಿಳಿಸಿರುವುದಾಗಿ ಕ್ಸಿನುವಾ ವರದಿ ಮಾಡಿದೆ.

ಕೊರೋನ ವೈರಸ್ ಸೋಂಕಿನ ಹಾವಳಿಗೂ ಸಮುದ್ರ ಆಹಾರ ಮಾರುಕಟ್ಟೆಗೂ ನಿಕಟವಾದ ಬಾಂಧವ್ಯವಿದೆಯೆಂದು ಈ ಮೊದಲಿನ ವರದಿಗಳು ತಿಳಿಸಿವೆ.

   ಚೀನಾದ ರೋಗನಿಯತ್ರಣ ಸಮಿತಿಯ ತಸೂಚನೆಯಂತೆ ಜನವರಿ 1ರಿಂದ ಜನವರಿ 12ರವರೆಗೆ ವುಹಾನ್ ಸಮುದ್ರಹಾರ ಸಗಟು ಮಾರುಕಟ್ಟೆಯಿಂದ ಒಟ್ಟು 33 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ31 ಸ್ಯಾಂಪಲ್‌ಗಳನ್ನು ಮಾರುಕಟ್ಟೆಯ ಪಶ್ಚಿಮ ವಲಯದಲ್ಲಿ ಕೇಂದ್ರೀತವಾಗಿರುವ ಕಾಡುಪ್ರಾಣಿಗಳ ಮಾರುಕಟ್ಟೆಯಿಂದ ಸಂಗ್ರಹಿಸಲಾಗಿತ್ತು.

  ಈ ಸ್ಯಾಂಪಲ್‌ಗಳ ಪರೀಕ್ಷೆಯಿಂದಾಗಿ, ಕಾಡುಪ್ರಾಣಿಗಳ ಮಾರಾಟಕ್ಕೂ, ಕೊರೋನ ವೈರಸ್ ಹಾವಳಿಗೂ ನೇರ ಸಂಬಂಧವಿರುವುದನ್ನು ಸೂಚಿಸಿದೆಯೆಂದು ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News