ಪಾಕ್: ಅಮೆರಿಕ ರಾಯಭಾರಿ ಕಚೇರಿ ಕಾರು ಢಿಕ್ಕಿ; ಮಹಿಳೆ ಮೃತ್ಯು ಐವರಿಗೆ ಗಾಯ

Update: 2020-01-27 17:12 GMT

ಇಸ್ಲಾಮಾಬಾದ್,ಜ.27: ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ, ಅಮೆರಿಕ ರಾಯಭಾರಿ ಕಚೇರಿಯ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮಹಿಳೆಯು ಸಾವನ್ನಪ್ಪಿದ್ದು, ಇತರ ಐವರು ಗಾಯಗೊಂಡಿದ್ದಾರೆ.

 ಅಮೆರಿಕ ರಾಯಭಾರಿ ಕಚೇರಿಗೆ ಸೇರಿದ ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನವು, ಎದುರು ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿರುವುದಾಗಿ ಪಾಕಿಸ್ತಾನದ ದಿನಪತ್ರಿಕೆ ಡಾನ್ ವರದಿ ಮಾಡಿದೆ.

ಅಪಘಾತಕ್ಕೀಡಾದ ವಾಹನಗಳಲ್ಲೊಂದು ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಪರಿಣಾಮವಾಗಿ ಈ ಅವಘಡಟ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.ಅವಘಡದಲ್ಲಿ ಗಾಯಗೊಂಡವರನ್ನು ಹಾಗೂ ಸಾವನ್ನಪ್ಪಿದ ಮಹಿಳೆಯ ಮೃತದೇಹವನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಡಾನಕೇಂದ್ರ (ಪಿಮ್ಸ್)ಕ್ಕೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ನಝೀಮಾ ಬೀಬಿ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕಿಯೊಬ್ಬ ದೇಹಸ್ಥಿತಿ ಚಿಂತಾಜನಕವಾಗಿದೆಯೆಂದು ಪೊಲೀಸ್ ವಕ್ತಾರರೊಬ್ಬಪರು ತಿಳಿಸಿದ್ದಾರೆ.

 ಅಮೆರಿಕ ರಾಯಭಾರಿ ಕಚೇರಿಯ ವಾಹನವನ್ನು ಪಾಕಿಸ್ತಾನಿ ಚಾಲಕನೊಬ್ಬನ ಚಲಾಯಿಸುತ್ತಿದ್ದನೆಂದು ಅವರು ಹೇಳಿದ್ದಾರೆ . ಅವಘಡದ ವೇಳೆ ಕಾರಿನಲ್ಲಿ ಬೇರೆ ವ್ಯಕ್ತಿಗಳು ಇದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News