'ಕೆವೈಸಿ ದೃಢೀಕರಣಕ್ಕೆ ಎನ್‍ ಪಿಆರ್ ಪತ್ರ': ಜನರಲ್ಲಿ ಆತಂಕ ಸೃಷ್ಟಿಸಿದ ಎಸ್‍ ಬಿಐ ಪ್ರಕಟಣೆ

Update: 2020-01-28 16:31 GMT

ಹೈದರಾಬಾದ್: ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್‍ಪಿಆರ್ ನೀಡಿದ ಪತ್ರಗಳನ್ನು ಕೆವೈಸಿಗಾಗಿ ಅರ್ಹ ದಾಖಲೆ ಎಂದು ಪರಿಗಣಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಹಲವರ ಹುಬ್ಬೇರಿಸಿದೆ.

ಎನ್‍ ಪಿಆರ್ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಸಿಕಂದರಾಬಾದ್‍ ನಿಂದ ಪ್ರಕಟವಾಗುವ ಆಂಗ್ಲ ದೈನಿಕದಲ್ಲಿ ಈ ಪ್ರಕಟಣೆ ನೀಡಲಾಗಿದೆ. ಇದು ಹಲವು ಟ್ವಿಟರಿಗರಿಂದ ಆಕ್ರೋಶಭರಿತ ಟ್ವೀಟ್‍ ಗಳಿಗೆ ಕಾರಣವಾಗಿದೆ.

ಕೆಲ ವಾರಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕೆವೈಸಿ  ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು ಎನ್‍ಪಿಆರ್  ಪತ್ರಗಳು ಕೂಡ ಕೆವೈಸಿಗೆ ನೀಡಬಹುದು ಎಂದು  ಹೇಳಿತ್ತು. ಇದಕ್ಕೂ ಮುನ್ನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇಂತಹುದೇ  ಪ್ರಕಟನೆ ಹೊರಡಿಸಿತ್ತು. ಆದರೆ ಈ ಎನ್‍ ಪಿಆರ್ ಪತ್ರಗಳು ಎಲ್ಲಿಂದ ಬರಲಿವೆ ಎಂಬುದು ಯಾರಿಗೂ ತಿಳಿದಿಲ್ಲ, ಎಸ್‍ ಬಿಐ ಅಧಿಕಾರಿಗಳಿಗೂ ಈ ಬಗ್ಗೆ ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News