ಪಕ್ಷದಲ್ಲಿ ಇರಬಹುದು, ಇಷ್ಟವಿಲ್ಲದಿದ್ದರೆ ಹೋಗಬಹುದು: ಪ್ರಶಾಂತ್ ಕಿಶೋರ್ ಬಗ್ಗೆ ನಿತೀಶ್ ಅಚ್ಚರಿಯ ಹೇಳಿಕೆ

Update: 2020-01-28 15:36 GMT

ಪಾಟ್ನಾ, ಜ. 28: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಜೆಡಿಯು ರಾಷ್ಟ್ರಾಧ್ಯಕ್ಷ ಪ್ರಶಾಂತ್ ಕಿಶೋರ್ ಇತ್ತೀಚೆಗೆ ನೀಡಿದ ಹೇಳಿಕೆಯಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

 ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಹಾಗೂ ಎನ್‌ಆರ್‌ಸಿ ಯನ್ನು ಅನುಕ್ರಮವಾಗಿ ಜಾರಿಗೆ ತರಲಾಗುವುದು ಎಂದು ಹೇಳಿರುವುದನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್, “ಯಾರಾದರೂ ಪತ್ರ ಬರೆದರೆ, ನಾನು ಅದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಯಾರಾದರೂ ಟ್ವೀಟ್ ಮಾಡಿದರೆ, ಅವರಿಗೆ ಪ್ರತಿ ಟ್ವೀಟ್ ಮಾಡುತ್ತೇನೆ. ಅದಕ್ಕೆ ನಾನು ಏನು ಮಾಡಲಿ? ವ್ಯಕ್ತಿಯೊಬ್ಬರು ಇಚ್ಛಿಸುವವರೆಗೆ ಪಕ್ಷದಲ್ಲಿ ಇರಬಹುದು. ಇಚ್ಛೆಯಿಲ್ಲದವರು ಹೋಗಬಹುದು. ಅವರು ಪಕ್ಷ ಹೇಗೆ ಪಕ್ಷ ಸೇರಿದರು ಎಂದು ತಿಳಿಯಲು ಬಯಸುತ್ತೀರಾ? ಪಕ್ಷಕ್ಕೆ ಸೇರಿಸಿಕೊಳ್ಳಲು ಅಮಿತ್ ಶಾ ಸೂಚಿಸಿದರು” ಎಂದು ಅವರು ತಿಳಿಸಿದರು.

ನಿತೀಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, “ನಿತೀಶ್ ಜಿ ಮಾತನಾಡಿದ್ದಾರೆ, ನೀವು ನನ್ನ ಉತ್ತರಕ್ಕೆ ಕಾಯಬೇಕು. ನಿಮಗೆ ಉತ್ತರಿಸಲು ನಾನು ಬಿಹಾರಕ್ಕೆ ಬರುತ್ತೇನೆ” ಎಂದಿದ್ದಾರೆ. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲದ ಬಗ್ಗೆ ಪ್ರಶಾಂತ್ ಕಿಶೋರ್ ಆಕ್ಷೇಪ ಹೊಂದಿದ್ದರು. ಹಲವು ಸಂದರ್ಭಗಳಲ್ಲಿ ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News