ಮದುವೆ ಮಂಟಪದಿಂದ ಹಿಂದು ಯುವತಿಯ ಅಪಹರಣ: ಪಾಕ್ ರಾಯಭಾರಿ ಕಚೇರಿ ಅಧಿಕಾರಿಯನ್ನು ಕರೆಸಿ ಪ್ರತಿಭಟನೆ ಸಲ್ಲಿಸಿದ ಭಾರತ

Update: 2020-01-28 15:46 GMT

ಹೊಸದಿಲ್ಲಿ,ಜ.28: ಮಂಗಳವಾರ ಪಾಕ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಯೋರ್ವರನ್ನು ಕರೆಸಿಕೊಂಡ ಭಾರತವು ಜ.25ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಲಾ ನಗರದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮದುವೆ ಮಂಟಪದಿಂದ ಹಿಂದು ಯುವತಿಯೋರ್ವಳ ಅಪಹರಣ ಕುರಿತು ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತು.

ಈ ವಿಷಯದಲ್ಲಿ ತನಿಖೆಯನ್ನು ನಡೆಸುವಂತೆ ಹಾಗೂ ಅಲ್ಪಸಂಖ್ಯಾತ ಹಿಂದು ಸಮುದಾಯ ಸೇರಿದಂತೆ ತನ್ನ ಪ್ರಜೆಗಳ ರಕ್ಷಣೆ,ಸುರಕ್ಷತೆ ಮತ್ತು ಹಿತರಕ್ಷಣೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆಯೂ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಇಂತಹ ತುಚ್ಛ ಮತ್ತು ಹೇಯ ಕೃತ್ಯಗಳ ರೂವಾರಿಗಳನ್ನು ತ್ವರಿತವಾಗಿ ಕಾನೂನಿನ ಶಿಕ್ಷೆಗೆ ಗುರಿಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅದು ಪಾಕ್‌ಗೆ ತಿಳಿಸಿದೆ.

ಜ.26ರಂದು ಸಿಂಧ್ ಪ್ರಾಂತ್ಯದ ಥರ್ಪರ್ಕಾರ್‌ನಲ್ಲಿ ಮಾತಾ ರಾಣಿ ಭಟಿಯಾನಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದ ಘಟನೆಯ ವಿರುದ್ಧವೂ ಭಾರತವು ಪ್ರತಿಭಟನೆಯನ್ನು ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News